ಶಿರಸಿಯ ಪಂಚವಟಿ ಲಾಡ್ಜಿನಲ್ಲಿ ವಾಸ್ತವ್ಯ ಹೂಡಿದ್ದ ಮಹಾಲಿಂಗ ನಾಯ್ಕ ಅವರು ಕುಸಿದು ಬಿದ್ದಿದ್ದು, ಆಸ್ಪತ್ರೆಗೆ ಸೇರಿಸುವ ಮುನ್ನ ಸಾವನಪ್ಪಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಮಹಾಲಿಂಗ ನಾಯ್ಕ ಅವರು ಚಾಲಕರಾಗಿ ಶ್ರಮಿಸುತ್ತಿದ್ದರು. 86 ವರ್ಷದ ಅವರು ಶುಕ್ರವಾರ ಎಂ ಎಸ್ ಭಟ್ಟ ಅವರ ಜೊತೆ ಪಿಕಪ್ ವಾಹನದಲ್ಲಿ ಶಿರಸಿಗೆ ಬಂದಿದ್ದರು. ಕೊಬರಿ ವ್ಯಾಪಾರ ಮಾಡುವ ಉದ್ದೇಶದಿಂದ ಅವರು ಅಲ್ಲಿ-ಇಲ್ಲಿ ತಿರುಗಾಟ ಮಾಡಿದ್ದರು.
ಅದಾದ ನಂತರ ವಿಶ್ರಾಂತಿಗಾಗಿ ಪಂಚವಟಿ ಲಾಡ್ಜಿಗೆ ಹೋಗಿದ್ದು, ಅಲ್ಲಿ ಮಹಾಲಿಂಗ ನಾಯ್ಕ ಅವರು ಅಸ್ವಸ್ಥರಾದರು. ಕುಸಿದು ಬಿದ್ದ ಅವರನ್ನು ಸರ್ಕಾರಿ ಆಸ್ಪತ್ರೆಗೆ ಕರೆತರುವ ಪ್ರಯತ್ನ ನಡೆಯಿತು. ಆದರೆ, ಆಸ್ಪತ್ರೆಗೆ ಬರುವ ಮುನ್ನವೇ ಮಹಾಲಿಂಗ ನಾಯ್ಕ ಅವರು ಸಾವನಪ್ಪಿದ್ದರು. ತಂದೆಯ ಸಾವಿನ ಬಗ್ಗೆ ರವಿಚಂದ್ರ ಮಹಾಲಿಂಗ ನಾಯ್ಕ ಅವರು ಪೊಲೀಸರಿಗೆ ಹೇಳಿಕೆ ನೀಡಿದರು. ಶಿರಸಿ ಹೊಸಮಾರುಕಟ್ಟೆ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿದರು.