ಮೈಸೂರಿನಿಂದ ಗೋಕರ್ಣಕ್ಕೆ ಬಂದ ಕಾರೊಂದು ರಸ್ತೆ ಅಂಚಿನ ಮನೆಗೆ ನುಗ್ಗಿದೆ. ಪರಿಣಾಮ ಮನೆ ಅಂಗಳದಲ್ಲಿದ್ದ ಎರಡು ಸ್ಕೂಟರ್, ಗೇಟ್ ಜೊತೆ ಆ ಕಾರಿಗೂ ಹಾನಿಯಾಗಿದೆ.
ವಿದೇಶಿಗರಿಬ್ಬರು ಈಚೆಗೆ ಮೈಸೂರಿಗೆ ಬಂದಿದ್ದು ಅವರು ಗೋಕರ್ಣ ಪ್ರವಾಸ ಮಾಡಲು ನಿರ್ಧರಿಸಿದ್ದರು. ಇದಕ್ಕಾಗಿ ಪ್ರವಾಸಿ ಕಾರನ್ನು ಅವರು ಬಾಡಿಗೆಗೆಪಡೆದಿದ್ದರು. ಭಾನುವಾರ ಬೆಳಗ್ಗೆ ಅವರು ಆ ಕಾರಿನಲ್ಲಿ ಗೋಕರ್ಣ ಪ್ರವೇಶಿಸಿದ್ದು, ದಂಡೆಭಾಗದಿAದ ಮೀನು ಮಾರುಕಟ್ಟೆಗೆ ತೆರಳುವ ತಿರುವಿನ ಕಡೆ ಕಾರು ಓಡಿಸಿದರು. ಅಲ್ಲಿದ್ದ ವಿಶ್ವನಾಥ ಎಂ ಭಟ್ ಬೇಲೆಹಿತ್ತಲ ಅವರ ಮನೆಗೆ ಕಾರು ನುಗ್ಗಿಸಿ, ಮನೆ ಅಂಗಳದಲ್ಲಿದ್ದ ಸ್ಕೂಟರನ್ನು ಜಖಂ ಮಾಡಿದರು.
ಭಾನುವಾರ ಬೆಳಗ್ಗೆ 1.30ಕ್ಕೆ ಈ ಅವಘಡ ನಡೆದಿದೆ. ವಿಶ್ವನಾಥ ಭಟ್ಟ ಅವರ ಕುಟುಂಬದವರು ಮನೆಯಲ್ಲಿ ಮಲಗಿದ್ದು, ಭಾರೀ ಪ್ರಮಾಣದ ಶಬ್ದ ಕೇಳಿ ಹೊರಗೆ ಬಂದಿದ್ದಾರೆ. ಆಗ, ಮನೆ ಮುಂದಿನ ಗೇಟು ಮುರಿದ ಕಾರು ಎರಡು ಸ್ಕೂಟರಿಗೆ ಡಿಕ್ಕಿ ಹೊಡೆದಿರುವುದು ಕಾಣಿಸಿದೆ. ಈ ಅಪಘಾತದಲ್ಲಿ ಕಾರು ಸಹ ಜಖಂ ಆಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ನಿದ್ರೆಯ ಮಂಪರಿನಲ್ಲಿ ಕಾರು ಓಡಿಸಿದ್ದೇ ಅವಾಂತರಕ್ಕೆ ಕಾರಣ ಎಂಬ ಮಾಹಿತಿಯಿದೆ.
`ನಿದ್ರೆಯ ಮಂಪರಿನಲ್ಲಿ ವಾಹನ ಓಡಿಸಬೇಡಿ’