ವೇಗವಾಗಿ ಬೈಕ್ ಓಡಿಸಿದ ಪರಿಣಾಮ ರಾಮಚಂದ್ರ ದೇವಾಡಿಗ ಅವರ ಬೈಕು ಅಪಘಾತಕ್ಕೀಡಾಗಿದ್ದು, ಬೈಕಿನಿಂದ ಬಿದ್ದು ಅವರು ಸಾವನಪ್ಪಿದ್ದಾರೆ.
ಭಟ್ಕಳದ ಬೈಲೂರಿನ ಸಣ್ಣಬಳಸೆ ಬಳಿ ರಾಮಚಂದ್ರ ಮಂಜುನಾಥ ದೇವಾಡಿಗ (40) ಅವರು ವಾಸವಾಗಿದ್ದರು. ಸೆಂಟ್ರಿAಗ್ ಕೆಲಸ ಮಾಡಿ ಅವರು ಬದುಕು ನಡೆಸುತ್ತಿದ್ದರು. ರಾಮಚಂದ್ರ ದೇವಾಡಿಗ ಅವರು ಯಾವಾಗಲೂ ವೇಗವಾಗಿ ಬೈಕ್ ಓಡಿಸುತ್ತಿದ್ದು, ಅದೇ ವೇಗ ಅವರ ಜೀವನ ಯಾತ್ರೆ ಮುಗಿಸಿದೆ. ಮಾರ್ಚ 21ರ ರಾತ್ರಿ ನಡೆದ ಅಪಘಾತದಲ್ಲಿ ಅವರು ಸಾವನಪ್ಪಿದ್ದಾರೆ.
ಆ ದಿನ ರಾತ್ರಿ ರಾಮಚಂದ್ರ ದೇವಾಡಿಗ ಅವರು ಮುರುಡೇಶ್ವರದಿಂದ ಬೈಲೂರು ಕಡೆಗೆ ಬೈಕ್ ಓಡಿಸುತ್ತಿದ್ದರು. ಅವರ ಬೈಕು ಗುದಿಗದ್ದೆ ಕ್ರಾಸಿನ ಬಳಿ ನಿಯಂತ್ರಣ ತಪ್ಪಿತು. ಪರಿಣಾಮ ಬೈಕು ಡಿವೈಡರಿಗೆ ಗುದ್ದಿತು. ತಲೆಗೆ ಹಾಗೂ ಮುಖಕ್ಕೆ ಗಂಭೀರ ಗಾಯವಾದ ರಾಮಚಂದ್ರ ದೇವಾಡಿಗ ಅವರು ಅಲ್ಲಿಯೇ ಸಾವನಪ್ಪಿದರು. ತಮ್ಮನ ಸಾವಿನ ಬಗ್ಗೆ ಪರಮಯ್ಯ ದೇವಾಡಿಗ ಅವರು ಮಾಹಿತಿ ನೀಡಿದ್ದು, ಮುರುಡೇಶ್ವರ ಪೊಲೀಸರು ಕಾನೂನು ಕ್ರಮ ಜರುಗಿಸಿದರು.
`ಅತಿ ವೇಗವದ ವಾಹನ ಚಾಲನೆ ಅಪಾಯಕಾರಿ’