ಅಕ್ರಮ ಸಂಬoಧದ ಅನುಮಾನದ ಹಿನ್ನಲೆ ಗಂಡ-ಹೆoಡತಿ ಬೇರೆ ಬೇರೆಯಾಗಿದ್ದು, ಆ ಕುಟುಂಬ ಒಂದುಗೂಡಿಸುವ ನಿಟ್ಟಿನಲ್ಲಿ ಶಿರಸಿಯ ಸರ್ಕಾರಿ ಅಧಿಕಾರಿಗಳು ರಾಜಿ ಪಂಚಾಯ್ತಿ ಮಾಡಿದ್ದಾರೆ. ಆದರೆ, ಸರ್ಕಾರಿ ಕಚೇರಿಯಲ್ಲಿ ರಾಜಿ ಪಂಚಾಯ್ತಿ ಅವಧಿಯಲ್ಲಿಯೇ ಮಾರಾಮಾರಿ ನಡೆದಿದೆ.
ಶಿರಸಿಯ ಆಯಿಶಾ ನಾಯ್ಕ (ಹೆಸರು ಬದಲಿಸಿದೆ) ಅವರು ತಮ್ಮ ದೂರದ ಸಂಬoಧಿ ಮತ್ತಿಗಾರದ ಮಂಜುನಾಥ ರಾಮಚಂದ್ರ ನಾಯ್ಕ ಅವರ ಜೊತೆ ಅಕ್ರಮ ಸಂಬoಧ ಹೊಂದಿದ ಅನುಮಾನವ್ಯಕ್ತವಾಗಿತ್ತು. ಈ ಹಿನ್ನಲೆ ಆಯಿಶಾ ನಾಯ್ಕ ಹಾಗೂ ಅವರ ಪತಿ ಉಮೇಶ ನಾಯ್ಕ ಅವರ ನಡುವೆ ವೈಮನಸ್ಸು ಮೂಡಿದ್ದು, ಅವರು ಬೇರೆ ಬೇರೆಯಾಗಿದ್ದರು. ಹೀಗಾಗಿ ಆಯಿಶಾ ನಾಯ್ಕ ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನೆರವು ಕೋರಿದ್ದರು. ಸರ್ಕಾರದ ಶಕ್ತಿ ಸದನದಲ್ಲಿ ಆಯಿಷಾ ನಾಯ್ಕ ಅವರು ಆಶ್ರಯಪಡೆದಿದ್ದರು. ಕೆಲ ದಿನದ ನಂತರ `ತಾನು ಸ್ವತಂತ್ರವಾಗಿ ಬದುಕಬೇಕಿದ್ದು, ಶಕ್ತಿ ಸದನದಿಂದ ಬಿಡುಗಡೆ ಮಾಡಿ’ ಎಂದು ಅವರು ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿ ವಿಚಾರಣೆಗಾಗಿ ಅಧಿಕಾರಿಗಳು ಸಂಬAಧಿಸಿದ ಎಲ್ಲರಿಗೂ ನೋಟಿಸ್ ನೀಡಿದ್ದರು. ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದರು. ಆಯಿಶಾ ನಾಯ್ಕ ಅವರ ಪತಿ ಉಮೇಶ ನಾಯ್ಕ, ದೂರದ ಸಂಬoಧಿ ಮಂಜುನಾಥ ನಾಯ್ಕ, ಅವರ ಪತ್ನಿ ಯಶೋಧಾ ನಾಯ್ಕ, ಆಯಿಶಾ ನಾಯ್ಕ ಅವರ ಅಣ್ಣ ಅಣ್ಣಪ್ಪ (ದೇವೇಂದ್ರ) ಮಂಜುನಾಥ ನಾಯ್ಕ, ಚಿಕ್ಕಪ್ಪ ನೆಹರು ನಾಯ್ಕ ಅವರು ವಿಚಾರಣೆಗೆ ಆಗಮಿಸಿದ್ದರು. ಮಾರ್ಚ 18ರ ಮಧ್ಯಾಹ್ನ ಈ ವಿಚಾರಣೆ ಶುರುವಾಗಿದ್ದು, ಕಾನೂನು ಸಲಹೆಗಾರರಾದ ಗಗನ ಆಚಾರಿ ಅವರು ಎಲ್ಲರ ಅಹವಾಲು ಆಲಿಸಿದರು. ಈ ವೇಳೆ ಆಯಿಷಾ ನಾಯ್ಕ ಅವರ ಅಣ್ಣ `ತಂದೆ-ತಾಯಿಗೆ ಹುಷಾರಿಲ್ಲ. ಹೀಗಾಗಿ ಆಯಿಷಾ ನಾಯ್ಕ ಅವರು ತಮ್ಮ ಮನೆಗೆ ಬರಬೇಕು’ ಎಂದು ಕೇಳಿಕೊಂಡರು. `ತಾನು ಬರುವುದಿಲ್ಲ. ಸ್ವತಂತ್ರವಾಗಿ ಬದುಕುವೆ’ ಎಂದು ಆಯಿಷಾ ನಾಯ್ಕ ಅವರು ಹೇಳಿದರು. ಆಗ, ವಕೀಲೆ ಗಗನ ಆಚಾರಿ ಅವರು `ಹಾಗೆಲ್ಲ ಬಿಡಲು ಬರುವುದಿಲ್ಲ. ಕುಟುಂಬದವರ ಜೊತೆ ಹೋಗುವುದಾದರೆ ಮಾತ್ರ ಬಿಡುಗಡೆ ಮಾಡುತ್ತೇವೆ’ ಎಂದು ತಿಳಿಸಿದರು.
ಇದರಿಂದ ಕಂಗಾಲಾದ ಆಯಿಶಾ ನಾಯ್ಕ ಅವರು `ತಾನು ತವರು ಮನೆಗೂ ಹೋಗುವುದಿಲ್ಲ. ಗಂಡನ ಮನೆಗೂ ಹೋಗುವುದಿಲ್ಲ. ಶಕ್ತಿ ಸದನದಲ್ಲಿಯೇ ಉಳಿಯುವೆ’ ಎಂದು ಬರೆದುಕೊಡುವ ಸಿದ್ಧತೆ ಮಾಡಿದರು. ಈ ವೇಳೆ ಆಯಿಶಾ ನಾಯ್ಕ ಅವರ ಅಣ್ಣ ದೇವೇಂದ್ರ ನಾಯ್ಕ ಹಾಗೂ ದೂರದ ಸಂಬoಧಿ ಮಂಜುನಾಥ ನಾಯ್ಕ ಅವರು ಪರಸ್ಪರ ಮಾತನಾಡುತ್ತಿದ್ದರು. ಆಗ, ಮಂಜುನಾಥ ನಾಯ್ಕ ಅವರು ಆಯಿಶಾ ಅವರನ್ನು ಉದ್ದೇಶಿಸಿ `ನೀನು ಒಂದು ವಾರ ತವರು ಮನೆಗೆ ಹೋಗಿ ಬಾ. ನಾನು ನನ್ನ ಹೆಂಡತಿಗೆ ಡೈವರ್ಸ ಕೊಟ್ಟು ನಿನ್ನನ್ನು ಕರೆದುಕೊಂಡು ಹೋಗುವೆ’ ಎಂದರು. ಇದರಿಂದ ಸಿಟ್ಟಾದ ದೇವೇಂದ್ರ ನಾಯ್ಕ ಅವರು `ಅವಳಿಗೆ ಅಲ್ಲಿ ಉಳಿದು ಬಾ ಹೇಳಲು ನೀ ಯಾರು?’ ಎಂದು ಪ್ರಶ್ನಿಸಿದರು. ಅಲ್ಲಿದ್ದ ಖುರ್ಚಿಯಿಂದ ಮಂಜುನಾಥ ನಾಯ್ಕ ಅವರ ತಲೆಗೆ ಹೊಡೆದರು. ಕೆಟ್ಟದಾಗಿ ಬೈದು ನಿಂದಿಸಿದರು. ಈ ವೇಳೆ ಅಲ್ಲಿದ್ದ ಶಿಶು ಅಭಿವೃದ್ಧಿ ಯೋಜನೆಯ ಹಿರಿಯ ಮೇಲ್ವಿಚಾರಕಿ ಸುಶೀಲಾ ಸಣಕೋಸ್ ಮೊಗೇರ್ ಹಾಗೂ ಸಿಬ್ಬಂದಿ ಅಂಜಲಿ ನಾಯ್ಕ ಸೇರಿ ಮಂಜುನಾಥ ನಾಯ್ಕ ಅವರನ್ನು ಕಾಪಾಡಿದರು. ಅದಾದ ನಂತರ ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆಯುವುದಾಗಿ ತಿಳಿಸಿ ಮಂಜುನಾಥ ನಾಯ್ಕ ಅವರು ಕಚೇರಿಯಿಂದ ಹೊರಬಿದ್ದಿದ್ದು, ಘಟನಾವಳಿಗಳ ಬಗ್ಗೆ ಸುಶೀಲಾ ಮೊಗೇರ್ ಅವರು ಮಾಹಿತಿ ನೀಡಿದರು. ಸರ್ಕಾರಿ ಕಚೇರಿಯಲ್ಲಿ ಅನುಚಿತವಾಗಿ ವರ್ತಿಸಿ ಹಲ್ಲೆ ಮಾಡಿದ ದೇವೇಂದ್ರ ನಾಯ್ಕ ಅವರ ವಿರುದ್ಧ ಶಿರಸಿ ಶಹರ ಠಾಣೆ ಪೊಲೀಸರು ಕಾನೂನು ಕ್ರಮ ಜರುಗಿಸಿದರು.