ಭತ್ತದ ಚೀಲ ಸಾಗಿಸುವ ಲಾರಿಯಲ್ಲಿ ಸರ್ಕಾರ ನೀಡುವ ಪಡಿತರ ಅಕ್ಕಿಯನ್ನು ಕಳ್ಳ ಸಾಗಾಟ ಮಾಡುತ್ತಿದ್ದವರು ಸಿಕ್ಕಿಬಿದ್ದಿದ್ದಾರೆ. ಅಂಕೋಲಾ ಬೆಳಸೆ ತಳಗದ್ದೆ ಕ್ರಾಸಿನ ಬಳಿ ಅಂಕೋಲಾದ ಆಹಾರ ನಿರೀಕ್ಷಕ ಮಂಜುನಾಥ ರೆಡ್ಡಿ ಸಿ ಹುಚ್ಚಣ್ಣನವರ್ ಅವರು ಲಾರಿ ತಪಾಸಣೆ ಮಾಡಿದಾಗ ಅಕ್ರಮ ಬಯಲಾಗಿದೆ.
ಭತ್ತದ ಚೀಲಗಳ ನಡುವೆ ತುಂಬಿಕೊoಡು ಸಾಗಿಸುತ್ತಿದ್ದ ಭಾರಿ ಪ್ರಮಾಣದ ಪಡಿತ ಅಕ್ಕಿಯನ್ನು ಆಹಾರ ಇಲಾಖೆಯ ಅಧಿಕಾರಿಗಳು ಅಂಕೋಲಾದಲ್ಲಿ ವಶಕ್ಕೆ ಪಡೆದಿದ್ದು, ಅವರ ವಿರುದ್ಧ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಲಾರಿಯ ಮೇಲ್ಬಾಗ ಭತ್ತದ ಚೀಲಗಳನ್ನು ತುಂಬಿ ಒಳಗಡೆ ಯಾವುದೇ ದಾಖಲೆ ಇಲ್ಲದ 50 ಕೆಜಿಯ ಒಟ್ಟು 152 ಪಡಿತರ ಅಕ್ಕಿಯ ಚೀಲ ಸಾಗಾಟ ಬೆಳಕಿಗೆ ಬಂದಿದೆ.
ಅAಕೋಲಾದ ವಂದಿಗೆಯ ರಾಜೇಶ ಎಸ್ ಶೆಟ್ಟಿ, ಪ್ರತೀಕ ರಾಜೇಶ ಶೆಟ್ಟಿ, ವಾಹನದ ಮಾಲೀಕ ಕುಮಟಾದ ಹರೀಶ ಪಟಗಾರ, ವಾಹನ ಚಾಲಕ ಯಲ್ಲಾಪುರದ ನಾರಾಯಣ ಶಂಕರ್ ಸಾಳಸ್ಕರ್, ಹಮಾಲಿ ಜಗದೀಶ ಸುರೇಶ ಆಗೇರ ಈ ವೇಳೆ ಸಿಕ್ಕಿ ಬಿದ್ದಿದ್ದಾರೆ. ಲಾರಿಯಲ್ಲಿದ್ದ ಒಟ್ಟು 3.07,200 ರೂ ಮೌಲ್ಯದ ಅಕ್ಕಿಯನ್ನು ವಶಕ್ಕೆ ಪಡೆಯಲಾಗಿದೆ. ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಕಲಿಸಿದ್ದು, ಕಾನೂನು ಕ್ರಮವಾಗಿದೆ.