ಸಪ್ತಪದಿ ಸಡಗರದಲ್ಲಿರುವ ವಿವೇಕ ಮಹಾಲೆ ಹಾಗೂ ನಾಗ ಸಂಧ್ಯಾ ಶಾಂತಿ ಅವರ ಸಂಕಷ್ಟ ದೂರ ಮಾಡುವುದಕ್ಕಾಗಿ ಅವರ ಸ್ನೇಹಿತರು ಗ್ಯಾಸ್ ಸಿಲೆಂಡರ್ ಉಡುಗರೆಯಾಗಿ ನೀಡಿದ್ದಾರೆ.
ರಾಜ್ಯದ ಎಲ್ಲಡೆ ಅಡುಗೆ ಸಿಲೆಂಡರ್ ಸಿಗುವುದೇ ದೊಡ್ಡ ಸಮಸ್ಯೆಯಾಗಿದೆ. ಅದರಲ್ಲಿಯೂ ಮದುವೆ ಹಾಗೂ ಇನ್ನಿತರ ಕಾರ್ಯಕ್ರಮ ನಡೆಸುವವರು ಗ್ಯಾಸ್ ಸಿಗದೇ ಪರದಾಡುತ್ತಿದ್ದಾರೆ. ಅನೇಕ ಹೊಟೇಲಿನವರು ಸಹ ಗ್ಯಾಸ್ ಸಮಸ್ಯೆಯಿಂದ ಹೊಟೇಲ್ ಬಂದ್ ಮಾಡಿದ್ದಾರೆ. ಹೀಗಾಗಿ ಗ್ಯಾಸ್ ಸಿಲೆಂಡರ್ ಪಡೆಯಲು ಎಲ್ಲರೂ ಸಾಲಿನಲ್ಲಿ ನಿಲ್ಲುತ್ತಿದ್ದು, ಈ ವಿಷಯದಲ್ಲಿ ಅನೇಕರು ಅಸಹಾಯಕರಾಗಿದ್ದಾರೆ. ಈ ಎಲ್ಲಾ ವಿಷಯ ಅರಿತ ಭಟ್ಕಳದ ವಿವೇಕ ಮಹಾಲೆ ಅವರ ಸ್ನೇಹಿತರು ವಧು-ವರರಿಗೆ ಗ್ಯಾಸ್ ಸಿಲೆಂಡರ್ ಉಡುಗರೆಯಾಗಿ ನೀಡಿದ್ದಾರೆ. ಅದೇ ಗ್ಯಾಸ್ ಬಳಸಿ ಗೃಹ ಪ್ರವೇಶದ ವೇಳೆ ಶಾಸ್ತೊçÃಕ್ತವಾಗಿ ಹಾಲು ಉಕ್ಕಿಸುವಂತೆ ಕೋರಿದ್ದಾರೆ.
ಭಟ್ಕಳ ಶಹರದಲ್ಲಿ ವಿವೇಕ ಮಹಾಲೆ ಮತ್ತು ನಾಗ ಸಂಧ್ಯಾ ಶಾಂತಿ ಅವರ ವಿವಾಹ ಮಹೋತ್ಸವದಲ್ಲಿ ಭಾಗಿಯಾದವರೆಲ್ಲರೂ ಗ್ಯಾಸ್ ಸಿಲೆಂಡರ್ ಉಡುಗರೆಯನ್ನು ವಿಶೇಷವಾಗಿ ನೋಡಿದರು. ಪ್ರಸ್ತುತ ಪರಿಸ್ಥಿತಿಯಲ್ಲಿ ಗ್ಯಾಸ್ ಸಿಲಿಂಡರ್ ಅಪರೂಪದ ವಸ್ತು ಎಂಬoತೆ ಕಾಣಿಸಿಕೊಂಡಿದ್ದು, ಸ್ನೇಹಿತರ ಸಹಾಯವನ್ನು ಆಗಮಿಸಿದವರು ಸ್ಮರಿಸಿದರು. ಕೆಲವರು ಇದನ್ನು ಹಾಸ್ಯದ ರೂಪದಲ್ಲಿಯೂ ನೋಡಿ, ಸದ್ಯದ ಪರಿಸ್ಥಿತಿ ಬಗ್ಗೆ ಮರುಕವ್ಯಕ್ತಪಡಿಸಿದರು.