ಉತ್ತರ ಕನ್ನಡ ಜಿಲ್ಲೆಯ ಅನೇಕ ವಿದ್ಯಾರ್ಥಿಗಳ ಭವಿಷ್ಯ ರೂಪಿಸಿದ ಧಾರವಾಡ ಅರ್ಜುನ ಕಾಲೇಜು ಈ ಬಾರಿಯ ಪಿಯುಸಿ ಫಲಿತಾಂಶದಲ್ಲಿಯೂ ಮಹತ್ವದ ಸಾಧನೆ ಮಾಡಿದೆ. ಈ ಕಾಲೇಜಿನ ಪ್ರವೇಶಪಡೆದಿದ್ದ ಶಿರಸಿಯ ದರ್ಶನ ಭಟ್ಟ ಹಾಗೂ ಯಲ್ಲಾಪುರದ ಪ್ರಣತಿ ಮೆಣಸುಮನೆ ಅವರು ಕ್ರಮವಾಗಿ ರಾಜ್ಯಕ್ಕೆ 8 ಹಾಗೂ 9ನೇ ರ‍್ಯಾಂಕ್ ಪಡೆದಿದ್ದಾರೆ.
600 ಅಂಕದ ಪರೀಕ್ಷೆಯಲ್ಲಿ ದರ್ಶನ್ ಭಟ್ ಅವರು 592 ಅಂಕಗಳಿಸಿದ್ದಾರೆ. ಪ್ರಣತಿ ಮೆಣಸುಮನೆ ಅವರು 591ಅಂಕಪಡೆದಿದ್ದಾರೆ. ಇದರೊಂದಿಗೆ ಈ ಕಾಲೇಜಿನ ವಿದ್ಯಾರ್ಥಿಗಳಾದ ಅನ್ಮೋಲ್ ಪ್ರಭು ಅವರು 588, ಅನ್ನಪೂರ್ಣ ನಾಯ್ಕ್ ಅವರು 585, ಆದರ್ಶ ಆರ್ ಭಟ್ ಅವರು 585, ವಿನೀತ್ ಚೌಹಾನ್ ಅವರು 585, ಅನನ್ಯ ಶಾಸ್ತ್ರಿ ಅವರು 584, ಮಾನ್ಯ ಹೆಗಡೆ ಅವರು 584, ಚಿನ್ಮಯ್ ಶಾನಭಾಗ ಅವರು 584ರ ಅಂಕಪಡೆದು ಕಾಲೇಜಿನ ಕೀರ್ತಿ ಹೆಚ್ಚಿಸಿದ್ದಾರೆ.
ಜೊತೆಗೆ ಪ್ರೀತಮ್ ಚವ್ಹಾಣ 584, ಸುಧನ್ವಾ ದೇಶಪಾಂಡೆ 582, ಅನನ್ಯ ಪೂಜಾರ್ 581, ಇಶಾನ ಶಾನಭಾಗ 580, ನಿಧಿ ಹಬ್ಬು 579, ಸಂಜನಾ ಪಂಡಿತ್ 579, ಆದರ್ಶ ಎ ಭಟ್ 578, ಸಿಂಚನಾ ಭಟ್ 578, ವಿಘ್ನೇಶ್ವರ 578, ರೇಣುಕಾ ಪಾಟೀಲ 577, ಸಾಧನಾ ದೇಶಪಾಂಡೆ 577, ದರ್ಶನ್ ನಾಯ್ಕ್ 576, ಕೇದಾರ ಜೋಶಿ 576, ಸಮೀಕ್ಷಾ ಹೆಗಡೆ 576, ಅನೀಶ್ ನಾಯ್ಕ್ 575, ಪ್ರೀತಂ ಯಡಹಳ್ಳಿ 574, ಸುಶಾಂತ್ ಎಂ ನಾಯ್ಕ್ 574, ಆಕಾಶ್ ಎಂ ರಾಥೋಡ್ 573, ಸೃಜನ್ ಪಾಟೀಲ್ 573, ಸಚಿನ್ ಜೋಶಿ 572, ಸತೀಶ್ ಹೆಗಡೆ 572, ಯಶಸ್ವಿನಿ ನೆಗಲೂರು 572, ಅನುಜ್ಞಾ ಗಾಂವ್ಕರ್ 571, ಸುಚೇತ್ ಭಟ್ 571, ಅಪೂರ್ವ ಹೆಗಡೆ 570 ಅಂಕಪಡೆದಿದ್ದಾರೆ.
ಇಲ್ಲಿನ 34 ವಿದ್ಯಾರ್ಥಿಗಳು ಶೇ 94ಕ್ಕೂ ಅಧಿಕ ಅಂಕಪಡೆದಿದ್ದಾರೆ. 29 ವಿದ್ಯಾರ್ಥಿಗಳು ಶೇ 90ರ ಮೇಲ್ಪಟ್ಟ ಸಾಧನೆ ಮಾಡಿದ್ದಾರೆ. 108 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಪಾಸಾಗಿದ್ದಾರೆ. ಇದರೊಂದಿಗೆ ಸಂಸ್ಕೃತ ವಿಷಯದಲ್ಲಿ 11 ವಿದ್ಯಾರ್ಥಿಗಳು, ಭೌತಶಾಸ್ತ್ರದಲ್ಲಿ 4, ರಸಾಯನಶಾಸ್ತ್ರದಲ್ಲಿ 1, ಗಣಿತ ಶಾಸ್ತ್ರದಲ್ಲಿ 20, ಗಣP Àಶಾಸ್ತ್ರದಲ್ಲಿ 9, ಜೀವಶಾಸ್ತ್ರದಲ್ಲಿ 2 ಮತ್ತು ಸಂಖ್ಯಾಶಾಸ್ತ್ರದಲ್ಲಿ 5 ವಿದ್ಯಾರ್ಥಿಗಳು 100ಕ್ಕೆ 100ಅಂಕಪಡೆದಿದ್ದಾರೆ. ಈ ಸಾಧನೆ ಹಿಂದೆ ಮಕ್ಕಳ ಶ್ರಮದ ಜೊತೆ ಶಿಕ್ಷಕರ ನಿರಂತರ ಪ್ರಯತ್ನ ಅಡಗಿದೆ ಎಂದು ಪ್ರಾಚಾರ್ಯರು ಹೇಳಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಕಾಲೇಜು ಆಡಳಿತ ಮಂಡಳಿ ಹರ್ಷವ್ಯಕ್ತಪಡಿಸಿದೆ.