ಉತ್ತರ ಕನ್ನಡ ಜಿಲ್ಲೆಯ ಜೊಯಿಡಾದಲ್ಲಿ 13 ವರ್ಷದ ಹುಡುಗಿಗೆ ಹೃದಯಘಾತ ಸಂಭವಿಸಿದೆ. ಎಲ್ಲರ ಜೊತೆ ಸಹಜವಾಗಿ ಆಟವಾಡುತ್ತಿದ್ದ ಗಂಗು ಗೌಳಿ ಅವರು ದಿಢಿರ್ ಆಗಿ ವಾಂತಿ ಮಾಡಿಕೊಂಡಿದ್ದು, ಎದೆನೋವು ಸಹಿಸಲಾಗದೇ ಸಾವನಪ್ಪಿದ್ದಾರೆ.
ಜೊಯಿಡಾದ ಅಸು ಗ್ರಾಮ ಪಂಚಾಯತ ವ್ಯಾಪ್ತಿಯ ಚಾಪಾಲಿ ಗೌಳಿವಾಡದಲ್ಲಿ ಗಂಗು ನವಿಲು ಗೌಳಿ ಅವರು ವಾಸವಾಗಿದ್ದರು. 13 ವರ್ಷದ ಅವರು 7ನೇ ತರಗತಿ ವಿದ್ಯಾರ್ಥಿನಿಯಾಗಿದ್ದರು. ರಾಮನಗರದ ಹನುಮಾನ್ ಗಲ್ಲಿಯಲ್ಲಿರುವ ಶಾಲೆಯಲ್ಲಿ ಅವರು ಓದುತ್ತಿದ್ದರು. ಬೇಸಿಗೆ ರಜೆ ಅಂಗವಾಗಿ ಗಂಗು ಗೌಳಿ ಅವರು ಮನೆಗೆ ಬಂದಿದ್ದರು.
ಮನೆ ಕೆಲಸದಲ್ಲಿ ಕುಟುಂಬದವರಿಗೆ ಸಹಾಯ ಮಾಡುತ್ತಿದ್ದ ಗಂಗು ಗೌಳಿ ಅವರು ಸಣ್ಣಪುಟ್ಟ ಆಟ-ಓಟಗಳಲ್ಲಿ ಭಾಗಿಯಾಗಿದ್ದರು. ಎಲ್ಲರ ಜೊತೆ ಆಟವಾಡುತ್ತಿದ್ದ ಗಂಗು ಗೌಳಿ ಅವರಿಗೆ ಒಮ್ಮೆ ವಾಂತಿ ಶುರುವಾಯಿತು. ಅದಾದ ಕೆಲವೇ ಕ್ಷಣದಲ್ಲಿ ಗಂಗು ಗೌಳಿ ಅವರ ಪ್ರಾಣ ಪಕ್ಷಿ ಹಾರಿ ಹೋಯಿತು. ಗಂಗು ಗೌಳಿ ಅವರಿಗೆ ಯಾವುದೇ ದೀರ್ಘ ಕಾಲದ ರೋಗಗಳಿರಲಿಲ್ಲ. ಹೃದಯ ಸಮಸ್ಯೆಯೂ ಕಾಣಿಸಿಕೊಂಡಿರಲಿಲ್ಲ. ಆಟ-ಪಾಠಗಳಲ್ಲಿ ಸಕ್ರೀಯವಾಗಿ ತೊಡಗಿಕೊಂಡಿದ್ದ ಬಾಲಕಿಯ ದಿಢೀರ್ ಮರಣದಿಂದ ಜನ ಆಘಾತಕ್ಕೆ ಒಳಗಾದರು.
`ಆರೋಗ್ಯದ ಕಡೆ ಜೋಪಾನ’