ಅಪಾಯಕಾರಿಯಾದ ಡ್ರಗ್ಸ್’ಗಳನ್ನು ಯುವಕರಿಗೆ ಕೊಡಿಸಿ ಅವರ ಕುಟುಂಬವನ್ನು ಬೀದಿ ಪಾಲು ಮಾಡಿದ ದಾಂಡೇಲಿಯ ಆಯಾನ್ ಖಾನ್ ಅವರು ಬಳ್ಳಾರಿ ಜೈಲಿಗೆ ಹೋಗಿದ್ದಾರೆ. ಮತ್ತೆ ಅವರು ಮಾಧಕ ವ್ಯಸನ ಮಾರಾಟ-ಸಾಗಾಟ ಹಾಗೂ ದಾಸ್ತಾನು ಮಾಡದ ಹಾಗೇ ತಡೆಯುವುದಕ್ಕಾಗಿ ಪೊಲೀಸರು ಈ ಕಠಿಣ ಕ್ರಮ ಜರುಗಿಸಿದ್ದಾರೆ.
ದಾಂಡೇಲಿಯ ಸುಭಾಷನಗರದಲ್ಲಿ ಆಯಾನ್ ಶಾನವಾಜ್ ಇಮ್ತಿಯಾಜ್ ಖಾನ್ ಅವರು ವಾಸವಾಗಿದ್ದರು. ಸಣ್ಣ ವಯಸ್ಸಿನಲ್ಲಿಯೇ ಮಾದಕ ಮೋಹಕ್ಕೆ ಒಳಗದ ಅವರು ತಮ್ಮ 23ನೇ ವಯಸ್ಸಿನಲ್ಲಿ `ಡ್ರಗ್ ಪ್ಲೆಡ್ಲರ್’ ಆಗಿ ಕುಖ್ಯಾತರಾದರು. ಮಾದಕ ವಸ್ತುಗಳ ಸಾಗಾಟ, ಮಾರಾಟ ಹಾಗೂ ದಾಸ್ತಾನು ಪ್ರಕ್ರಿಯಲ್ಲಿ ತೊಡಗಿದ್ದ ಆಯನ್ ಅವರ ಮೇಲೆ ಪೊಲೀಸರು ಸಾಕಷ್ಟು ಬಾರಿ ದಾಳಿ ಮಾಡಿದ್ದರು. ಅವರ ಬಳಿ ಸಿಕ್ಕಿದ್ದ ಮಾದಕ ವ್ಯಸನಗಳನ್ನು ವಶಕ್ಕೆಪಡೆದು ಕೇಸು ದಾಖಲಿಸಿದ್ದರು.
ದಾಂಡೇಲಿಯಲ್ಲಿ ಐದು ಕೇಸು ಹಾಗೂ ಹುಬ್ಬಳ್ಳಿಯಲ್ಲಿ ಒಂದು ಕೇಸು ದಾಖಲಾದರೂ ಆಯನ್ ಖಾನ್ ವರ್ತನೆಯಲ್ಲಿ ಬದಲಾವಣೆ ಆಗಲಿಲ್ಲ. ಮತ್ತೆ ಮತ್ತೆ ಡ್ರಗ್ ಸಾಗಾಟ ಹಾಗೂ ಮಾರಾಟ ಪ್ರಕ್ರಿಯಲ್ಲಿ ಆಯನ್ ಖಾನ್ ತಮ್ಮನ್ನು ತೊಡಗಿಸಿಕೊಂಡಿದ್ದು, ಪೊಲೀಸರು ಅವರನ್ನು ಬಂಧಿಸಿದರು. ಬಂದನದಲ್ಲಿದ್ದರೂ ಆಯನ್ ಖಾನ್ ಒಂಚೂರು ಬದಲಾಗಲಿಲ್ಲ. ಡ್ರಗ್ ಮಾರಾಟದ ಮೂಲಕ ಯುವ ಜನರ ಆರೋಗ್ಯ, ಭವಿಷ್ಯ ಹಾಗೂ ಆರ್ಥಿಕತೆ ಮೇಲೆ ದುಷ್ಪರಿಣಾಮ ಬೀರುತ್ತಿದ್ದ ಆಯನ್ ಖಾನ್ ಅವರನ್ನು ಬಳ್ಳಾರಿ ಜೈಲಿಗೆ ಕಳುಹಿಸಲು ಪೊಲೀಸರು ನಿರ್ಧರಿಸಿದರು.
ಡ್ರಗ್ ಮಾರಾಟ-ಸಾಗಾಟ ತಡೆಯ ಮುನ್ನಚ್ಚರಿಕಾ ಕ್ರಮವಾಗಿ ಆಯನ್ ಖಾನ್ ಅವರನ್ನು ಬಳ್ಳಾರಿ ಕಾರಾಗೃಹಕ್ಕೆ ಕಳುಹಿಸಲು ಶಿಫಾರಸ್ಸು ನಡೆದಿದ್ದು, ಇದಕ್ಕೆ ಮಂಗಳೂರು ವಲಯದ ಪೊಲೀಸ್ ಮಹಾನಿರೀಕ್ಷಕರು ಸಮ್ಮತಿ ನೀಡಿದರು. ಈ ಹಿನ್ನಲೆ ಡ್ರಗ್ ಪೆಡ್ಲರ್ ಆಯಿನ್ ಖಾನ್ ಬಳ್ಳಾರಿ ಜೈಲು ಸೇರಿದರು. ಆಯಿನ್ ಖಾನ್ ಅವರು ಡ್ರಗ್ ಮಾರಾಟ ವಿಷಯವಾಗಿ ಉತ್ತರ ಕನ್ನಡ ಜಿಲ್ಲೆಯಿಂದ ಬಳ್ಳಾರಿ ಜೈಲಿಗೆ ಹೋದ ಮೊದಲ ವ್ಯಕ್ತಿಯಾಗಿದ್ದಾರೆ. ಮಾದಕ ವಸ್ತು ಮಾರಾಟ-ಸಾಗಾಟ ಮಾಡುವವರಿಗೆ ಕಠಿಣ ಕ್ರಮ ಜರುಗಿಸುವುದಾಗಿ ಪೊಲೀಸರು ಎಚ್ಚರಿಸಿದ್ದಾರೆ.