ಅರಬ್ಬಿ ಸಮುದ್ರಕ್ಕೆ ಮೀನುಗಾರಿಕೆಗೆ ಹೋಗಿದ್ದ ಹೊನ್ನಾವರದ ಚಂದ್ರಕಾoತ ಖಾರ್ವಿ ಅವರು ದೋಣಿ ದುರಂತದಲ್ಲಿ ಸಾವನಪ್ಪಿದ್ದಾರೆ. ಅಲೆಗಳ ಅಬ್ಬರಕ್ಕೆ ಸಿಲುಕಿ ದೋಣಿ ಮುಗುಚಿದ್ದು, ಕುಟುಂಬದಲ್ಲಿ ಶೋಕ ಆವರಿಸಿದೆ.
ಮೇ 9ರ ಶನಿವಾರ ಕೇಶವ ರಾಮ ಖಾರ್ವಿ ಅವರ `ಶ್ರೀರಾಮ’ ಎಂಬ ದೋಣಿಯಲ್ಲಿ ಚಂದ್ರಕಾoತ ಖಾರ್ವಿ ಅವರು ಮೀನುಗಾರಿಕೆಗೆ ಹೋಗಿದ್ದರು. ಅಪ್ಸರಕೊಂಡದಲ್ಲಿನ ಅಲೆಗಳ ಅಬ್ಬರಕ್ಕೆ ಆ ದೋಣಿ ಪಲ್ಟಿಯಾಗಿದೆ. ಅದೇ ಭಾಗದ ಚಂದ್ರಕಾoತ ಲಕ್ಷಣ ಖಾರ್ವಿ (38) ಅವರು ಸಮುದ್ರದಲ್ಲಿ ಮುಳುಗಿ ಸಾವನಪ್ಪಿದ್ದಾರೆ.
ಕಡಲತೀರದಿಂದ 1.5ಕಿಮೀ ದೂರದಲ್ಲಿ ಈ ದುರಂತ ನಡೆದಿದೆ. ಹಠಾತ್ ಎದುರಾದ ಅಲೆಗಳನ್ನು ಎದುರಿಸಲಾಗದೇ ದೋಣಿ ಮುಗುಚಿ ಬಿದ್ದಿದ್ದು, ಈ ವೇಳೆ ಕೇಶವ ಅವರು ದೋಣಿ ಹಿಡಿದುಕೊಂಡು ಜೀವ ಉಳಿಸಿಕೊಂಡಿದ್ದಾರೆ. ಅಸ್ವಸ್ಥರಾಗಿದ್ದ ಚಂದ್ರಕಾAತ ಅವರನ್ನು ರಕ್ಷಿಸುವ ಪ್ರಯತ್ನ ಮಾಡಿದ್ದಾರೆ. ಹಗ್ಗದ ಸಹಾಯದಿಂದ ಚಂದ್ರಕಾoತ ಅವರನ್ನು ದೋಣಿಯ ಸಮೀಪ ಕರೆತಂದಿದ್ದು, ನಂತರ ಅಸ್ವಸ್ಥರಾದ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಅದರಿಂದ ಪ್ರಯೋಜನವಾಗಿಲ್ಲ.