ದಾoಡೇಲಿ ಕಾಡಿನಲ್ಲಿ ಅಲೆದಾಡುವ ಚಿರತೆ ಸೋಮವಾರ ನಸುಕಿನಲ್ಲಿ ಕ್ಯಾಮರಾ ಕಣ್ಣಿಗೆ ಬಿದ್ದಿದೆ. ದಾಂಡೇಲಿ ಪ್ರವಾಸಕ್ಕೆ ಬಂದಿದ್ದ ವ್ಯಕ್ತಿಯೊಬ್ಬರು ಚಿರತೆಯ ಚಲನ-ವಲನ ಚಿತ್ರಿಸಿದ್ದಾರೆ.
ಮುಂಜಾನೆ 2 ಗಂಟೆ ಅವಧಿಯಲ್ಲಿ ದಾಂಡೇಲಿಯಿAದ 10ಕಿಮೀ ದೂರದಲ್ಲಿ ಚಿರತೆ ಕಾಣಿಸಿದೆ. ರಸ್ತೆ ಮೇಲೆ ಚಿರತೆ ಓಡಾಡಿಕೊಂಡಿದ್ದು, ಗಣೇಶಗುಡಿ ಕಡೆ ಹೋಗುತ್ತಿದ್ದವರು ಅದನ್ನು ತಮ್ಮ ಮೊಬೈಲಿನಲ್ಲಿ ಸೆರೆ ಹಿಡಿದಿದ್ದಾರೆ.
10ನೇ ನಂಬರ್ ಸೇತುವೆ ಹತ್ತಿರ ಈ ಚಿರತೆ ಓಡಾಡಿದ ದೃಶ್ಯ ಸೆರೆ ಸಿಕ್ಕಿದೆ. ದಾಂಡೇಲಿ ವನ್ಯಜೀವಿ ಪ್ರದೇಶದಲ್ಲಿ ಚಿರತೆ ಓಡಾಟ ಸಾಮಾನ್ಯವಾಗಿದೆ. ಅನೇಕ ಪ್ರವಾಸಿಗರ ಕಣ್ಣಿಗೆ ಈ ಚಿರತೆ ಕಾಣಿಸಿಕೊಂಡಿದೆ. ರಸ್ತೆ ಮದ್ಯೆ ಚಿರತೆ ಓಡಾಟ ಈ ಭಾಗದಲ್ಲಿ ಸಹಜವಾಗಿದ್ದು, ಬೇರೆ ಬೇರೆ ಊರುಗಳಿಂದ ಬರುವವರಿಗೆ ವನ್ಯಜೀವಿ ದರ್ಶನ ಅಪರೂಪವೆನಿಸಿದೆ.