ಸoಗೀತ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ ಕಲಾಭಿಮಾನಿಗಳಿಗಾಗಿ ಯಲ್ಲಾಪುರದ ರೈಸಿಂಗ್ ಸ್ಟಾರ್ ಮ್ಯೂಸಿಕಲ್ ಅಕಾಡೆಮಿಯೂ `ರೈಸಿಂಗ್ ಸ್ಟಾರ್ ಗಿಟಾರ್ ಕ್ಲಾಸ್’ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಸಂವಹನ ಕೇಂದ್ರವನ್ನು ಶುರು ಮಾಡಿದೆ. ಈ ಕೇಂದ್ರದಲ್ಲಿ ಸಂಗೀತದ ಜೊತೆ ಗಿಟಾರ್ ನುಡಿಸುವಿಕೆಯನ್ನು ಕಲಿಸಲಾಗುತ್ತದೆ.
ಪ್ರಾಥಮಿಕ ಹಂತದಿAದ ಸುಧಾರಿತ ಹಂತದವರೆಗೆ ಇಲ್ಲಿ ಸಂಗೀತ ತರಬೇತಿ ನೀಡಲಾಗುತ್ತದೆ. ವಿಶೇಷವಾಗಿ ಹಾಡುಗಳೊಂದಿಗೆ ಗಿಟಾರ್ ನುಡಿಸುವುದು ಮತ್ತು ರೆಕಾರ್ಡಿಂಗ್‌ಗೆ ಸಂಬAಧಿಸಿದ ಕಾರ್ಯಕ್ರಮಗಳ ಮಾರ್ಗದರ್ಶನ ನೀಡಲಾಗುತ್ತದೆ. ಇನ್ನಿತರ ಸಾಂಸ್ಕೃತಿಕ ಚಟುವಟಿಕೆಗಳಿಗೆ ಸಹ ಇಲ್ಲಿ ಅವಕಾಶ ಕಲ್ಪಿಸಲಾಗಿದೆ.
ಸಂಗೀತ ಕಲಿಯಲು ವಯಸ್ಸು ಅಡ್ಡಿಯಲ್ಲ. ಹೀಗಾಗಿ ಇಲ್ಲಿ ಮಕ್ಕಳಿಂದಹಿಡಿದು ವೃದ್ಧವರವರೆಗೆ ವಯಸ್ಸಿನ ಹಂಗಿಲ್ಲದೇ ಕಲಿಕೆಗೆ ಬರುವ ಅವಕಾಶ ನೀಡಲಾಗಿದೆ. ಎಲ್ಲರಿಗೂ ಮುಕ್ತ ಪ್ರವೇಶ ಕಲ್ಪಿಸಲಾಗಿದ್ದು, ಪ್ರವೇಶಾತಿ ಪ್ರಕ್ರಿಯೆ ಶುರುವಾಗಿದೆ. ಯಲ್ಲಾಪುರದ ಬಸ್ ನಿಲ್ದಾಣದ ಹಿಂಭಾಗದಲ್ಲಿರುವ ವೈಭವ್ ಬಿಲ್ಡಿಂಗ್’ನಲ್ಲಿ ತರಗತಿಗಳು ನಡೆಯಲಿವೆ. ಹೆಚ್ಚಿನ ಮಾಹಿತಿಗೆ ಇಲ್ಲಿ ಫೋನ್ ಮಾಡಿ: 7975670097