ಯಲ್ಲಾಪುರದ ರೈಸಿಂಗ್ ಸ್ಟಾರ್ ಮ್ಯೂಸಿಕಲ್ ಅಕಾಡೆಮಿಯೂ ಮೇ 24ರಂದು ಗಾಯನ ಸ್ಪರ್ಧೆ ಆಯೋಜಿಸಿದ್ದು, ಈ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನಪಡೆದವರಿಗೆ 3 ಸಾವಿರ ರೂ ಬಹುಮಾನ ನೀಡುವುದಾಗಿ ಘೋಷಿಸಿದೆ.
ಈಗಾಗಲೇ ಯಲ್ಲಾಪುರದಲ್ಲಿ ಸಂಗೀತ ತರಗತಿಯನ್ನು ಶುರು ಮಾಡಿರುವ ರೈಸಿಂಗ್ ಸ್ಟಾರ್ ಮ್ಯೂಸಿಕಲ್ ಅಕಾಡೆಮಿ ಸಂಗೀತ ಪ್ರೇಮಿಗಳ ಪ್ರೋತ್ಸಾಹಕ್ಕಾಗಿ ಈ ಸ್ಪರ್ಧೆ ಆಯೋಜಿಸಿದೆ. ಸದ್ಯ `ರೈಸಿಂಗ್ ಸ್ಟಾರ್-2026′ ಎಂಬ ಶೀರ್ಷಿಕೆಯ ಅಡಿ ಸಂಗೀತ ಸ್ಪರ್ಧೆ ನಡೆಯುತ್ತಿದ್ದು, ಮೇ 24ರ ಬೆಳಗ್ಗೆ 10ಗಂಟೆಯಿAದ ಮಧ್ಯಾಹ್ನ 1ಗಂಟೆಯತವರೆಗೆ ಯಲ್ಲಾಪುರ ಬಸ್ ನಿಲ್ದಾಣ ಹಿಂಭಾಗದ ವೈಭವ್ ಬಿಲ್ಡಿಂಗ್’ನಲ್ಲಿ ಈ ಸ್ಪರ್ಧೆ ನಡೆಯಲಿದೆ. ಈ ಸ್ಪರ್ಧೆ ಯಲ್ಲಾಪುರ ತಾಲೂಕಿನವರಿಗೆ ಮಾತ್ರ ಸೀಮಿತ.
ಈ ಸ್ಪರ್ಧೆಯಲ್ಲಿ ಹಾಡುವವರಿಗೆ 5 ವರ್ಷದಿಂದ 13 ವರ್ಷಗಳೊಳಗಿನವರಿಗೆ ಒಂದು ವಿಭಾಗ ಹಾಗೂ 14 ವರ್ಷ ಮೇಲ್ಪಟ್ಟವರಿಗೆ ಮತ್ತೊಂದು ವಿಭಾಗ ಮಾಡಲಾಗಿದೆ. ಕನ್ನಡ ಹಾಗೂ ಹಿಂದಿ ಚಿತ್ರಗೀತೆಗಳನ್ನು ಪ್ರಸ್ತುತಪಡಿಸಬಹುದಾಗಿದೆ. ಮೂರು ಹಂತದಲ್ಲಿ ಗಾಯನ ಸ್ಪರ್ಧೆ ನಡೆಯಲಿದೆ. ಸ್ಪರ್ಧೆಯಲ್ಲಿ ಭಾಗವಹಿಸಲು ಆಧಾರ್ ಕಾರ್ಡ ಕಡ್ಡಾಯವಾಗದ್ದು, 200ರೂ ಪ್ರವೇಶ ಶುಲ್ಕ ಪಾವತಿಸಬೇಕಿದೆ. ಪ್ರಥಮ ಬಹುಮಾನ 3 ಸಾವಿರ ರೂ, ದ್ವಿತೀಯ ಬಹುಮಾನ 2 ಸಾವಿರ ರೂ ಹಾಗೂ ತೃತೀಯ ಬಹುಮಾನ 1 ಸಾವಿರ ರೂ ನೀಡಲಾಗುತ್ತದೆ. ಜೊತೆಗೆ ಆಕರ್ಷಕ ಪದಕದ ಜೊತೆ ಬಹುಮಾನ ವಿಜೇತರನ್ನು ಗೌರವಿಸಲಾಗುತ್ತದೆ. ಹೆಚ್ಚಿನ ಮಾಹಿತಿಗೆ ಇಲ್ಲಿ ಫೋನ್ ಮಾಡಿ: 7975670097 ಅಥವಾ 8618732514