ಯಲ್ಲಾಪುರ-ಹುಬ್ಬಳ್ಳಿ ಹೆದ್ದಾರಿಯಲ್ಲಿ ಟಿಪ್ಪರ್ ಬೈಕಿಗೆ ಗುದ್ದಿದೆ. ಪರಿಣಾಮ ಬೈಕಿನಲ್ಲಿ ಸಂಚರಿಸುತ್ತಿದ್ದ ವ್ಯಕ್ತಿಯೊಬ್ಬರು ಸಾವನಪ್ಪಿದ್ದಾರೆ.
ಯಲ್ಲಾಪುರದ ಕಾಳಮ್ಮ ನಗರದ ಅಕ್ಬರ್‌ಸಾಬ್ ಸಬ್ಬೀರ ಶೇಖ್ ಅವರ ದುಡುಕುತನವೇ ಈ ಅಪಘಾತಕ್ಕೆ ಕಾರಣ. ಟಿಪ್ಪರ್ ಚಾಲಕರಾಗಿದ್ದ ಅಕ್ಬರ್‌ಸಾಬ್ ಅವರು ಮುಂದಿದ್ದ ವಾಹನ ಹಿಂದಿಕ್ಕುವ ಬರದಲ್ಲಿ ಯಲ್ಲಾಪುರದ ಕೆಜಿಎನ್ ಬ್ರಿಕ್ಸ್ ಇಂಡಸ್ಟಿ ಬಳಿ ವೇಗವಾಗಿ ವಾಹನ ಓಡಿಸಿದ್ದರು. ಈ ವೇಳೆ ಯಲ್ಲಾಪುರ ನೂತನ ನಗರ ಜಡ್ಡಿಯ ರಾಘವೇಂದ್ರ ಶ್ಯಾಮರಾವ್ ಕುಲಕರ್ಣಿ ಅವರು ಬೈಕಿನಲ್ಲಿ ಚಲಿಸುತ್ತಿದ್ದು, ಬೈಕಿನ ಬಂಪರಿಗೆ ಟಿಪ್ಪರ್ ಲಾರಿ ಸಿಕ್ಕಿ ಬಿದ್ದಿತು. ಅದಾಗಿಯೂ, ಅದೇ ವೇಗದಲ್ಲಿ ಲಾರಿ ಸಂಚರಿಸಿದ ಪರಿಣಾಮ ರಾಘವೇಂದ್ರ ಕುಲಕರ್ಣಿ ಅವರು ಬೈಕಿನಿಂದ ಬಿದ್ದು ಸಾವನಪ್ಪಿದರು.
ರಾಘವೇಂದ್ರ ಕುಲಕರ್ಣಿ ಅವರು ದಾಂಡೇಲಿ ಮೂಲದವರಾಗಿದ್ದು, ಖಾಸಗಿ ನೌಕರಿಯಲ್ಲಿದ್ದರು. ಕುಟುಂಬದ ಜೊತೆ ಅವರು ನೂತನ ನಗರ ಜಡ್ಡಿಯಲ್ಲಿ ವಾಸವಾಗಿದ್ದರು. ಅಪಘಾತದ ನಂತರ ಅವರನ್ನು ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ನಡೆದರೂ ಪ್ರಯೋಜನವಾಗಲಿಲ್ಲ. ಪೆಟ್ರೋಲ್ ಬಂಕಿನಲ್ಲಿ ಕೆಲಸ ಮಾಡುವ ಬೆಳಗೇರೆಯ ದಯಾನಂದ ಕೃಷ್ಣ ಮರಾಠಿ ಅವರು ಅಪಘಾತದ ಪ್ರತ್ಯಕ್ಷದರ್ಶಿಯಾಗಿದ್ದು, ಅವರೇ ಈ ವಿಷಯದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರು.