ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!
January 3, 2026
ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!
January 3, 2026
ರಂಜಿತಾ ಕೊಂದ ರಫೀಕ್ ಇನ್ನಿಲ್ಲ!
January 4, 2026
ಶಾಲೆಗೆ ಹೋಗುವ ಬಾಲಕಿಯ ಮೈ ಮುಟ್ಟಿದ ಗೋವಿಂದ ಹರಿಕಂತ್ರ ಅವರಿಗೆ ನ್ಯಾಯಾಲಯ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆವಿಧಿಸಿದೆ. ಅಪ್ತಾಪ್ತೆ ಮೇಲೆ ಅತ್ಯಾಚಾರ ನಡೆಸಿದಕ್ಕಾಗಿ ಜೈಲು ಶಿಕ್ಷೆ ಅನುಭವಿಸುವುದರ ಜೊತೆ 1 ಲಕ್ಷ ರೂ ದಂಡವನ್ನು ಪಾವತಿಸುವಂತೆ ಆದೇಶಿಸಿದೆ.
ಕುಮಟಾದ ಹೊಸಕಟ್ಟಾ ಗ್ರಾಮದ ತೊರೆಗಜನಿಯಲ್ಲಿ ಗೋವಿಂದ ಚೌಡು ಹರಿಕಂತ್ರ ಅವರು ವಾಸವಾಗಿದ್ದರು. ಕಾಮುಕ ಬುದ್ದಿಯ ಗೋವಿಂದ ಹರಿಕಂತ್ರ ಬಾಲಕಿಯೊಬ್ಬರನ್ನು ಲೈಂಗಿಕವಾಗಿ ಬಳಸಿಕೊಂಡಿದ್ದರು. 2022ರಲ್ಲಿ ಸಂತ್ರಸ್ತೆ ಈ ವಿಷಯ ಪಾಲಕರ ಬಳಿ ಹೇಳಿದ್ದು, ಅದು ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಮಕ್ಕಳ ಸ್ನೇಹಿ ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ನಡೆಸಿದ್ದರು. 48 ವರ್ಷದ ಗೋವಿಂದ ಹರಿಕಂತ್ರ ಅವರ ಕ್ರೂರ ನಡೆಯನ್ನು ಪೊಲೀಸರು ದೋಷಾರೋಪಣ ಪಟ್ಟಿಯಲ್ಲಿ ವಿವರಿಸಿದ್ದರು.
ಆ ವೇಳೆ ಕುಮಟಾ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾಗಿದ್ದ ವಸಂತ ಆಚಾರ್ ಅವರು ಸಮಗ್ರ ತನಿಖೆ ನಡೆಸಿ, ನ್ಯಾಯಾಲಯಕ್ಕೆ ತಮ್ಮ ವರದಿ ಒಪ್ಪಿಸಿದ್ದರು. ವಿಶೇಷ ಸಾರ್ವಜನಿಕ ಅಭಿಯೋಜಕ ಗುರುಶಾಂತಯ್ಯ ಕುರ್ಡಿಕೇರಿ ಅವರು ವಾದ ಮಂಡಿಸಿ, ಆರೋಪಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಮನವಿ ಮಾಡಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯದ ವಿವಿಧ ಸಾಕ್ಷ್ಯಾಧಾರಗಳು ಮತ್ತು ಪುರಾವೆಗಳನ್ನು ಗಮನಿಸಿತು. ಆರೋಪ ಸಾಭೀತಾದ ಹಿನ್ನಲೆ ನ್ಯಾಯಾಧೀಶೆ ಪ್ರತಿಭಾ ಬಂಡೂರಾವ್ ಕುಲಕರ್ಣಿ ಅವರು ಆರೋಪಿಗೆ 20 ವರ್ಷಗಳ ಜೈಲು ಶಿಕ್ಷೆ ಹಾಗೂ 1 ಲಕ್ಷ ದಂಡ ವಿಧಿಸಿದರು.
.

This will close in 6 seconds
You cannot copy content of this page