ಇತ್ತೀಚಿನ ಸ್ಮಾರ್ಟ್‌ಫೋನ್‌ಗಳಲ್ಲಿ ಕೆಲವೊಮ್ಮೆ ಸ್ಕ್ರೀನ್‌ನ ಮೇಲ್ಭಾಗದಲ್ಲಿ ಸಣ್ಣ ಹಸಿರು ಚುಕ್ಕೆ ಕಾಣಿಸುತ್ತದೆ. ಇದನ್ನು ಕಂಡ ತಕ್ಷಣ ಅನೇಕರು “ಯಾರಾದರೂ ನನ್ನ ಫೋನ್‌ನ್ನು ಕದ್ದಾಲಿಸುತ್ತಿದ್ದಾರೆಯೇ?” ಅಥವಾ “ಯಾವುದಾದರೂ ಥರ್ಡ್ ಪಾರ್ಟಿ ಆ್ಯಪ್ ನನ್ನ ಮೇಲೆ ಕಣ್ಗಾವಲು ಇಟ್ಟಿದೆಯೇ?” ಎಂಬ ಅನುಮಾನಕ್ಕೆ ಒಳಗಾಗುತ್ತಾರೆ. ಆದರೆ ಸತ್ಯ ಏನು ?
ವಾಸ್ತವದಲ್ಲಿ ಈ ಹಸಿರು ಚುಕ್ಕೆ ನಿಮ್ಮ ಸುರಕ್ಷತೆಗಾಗಿ ರೂಪಿಸಲಾದ ವಿಶೇಷ ಭದ್ರತಾ ಸೂಚಕವಾಗಿದೆ. ನಿಮ್ಮ ಮೊಬೈಲ್‌ನ ಕ್ಯಾಮೆರಾ ಅಥವಾ ಮೈಕ್ರೋಫೋನ್ ಬಳಕೆಯಲ್ಲಿದ್ದಾಗ ಈ ಚುಕ್ಕೆ ಕಾಣಿಸಿಕೊಳ್ಳುತ್ತದೆ. ವೀಡಿಯೊ ಕರೆ ಮಾಡುತ್ತಿರುವಾಗ, ಫೋಟೋ ತೆಗೆಯುವಾಗ ಅಥವಾ ರೆಕಾರ್ಡ್ ಮಾಡುವಾಗ ಫೋನ್ ನಿಮಗೆ ಎಚ್ಚರಿಕೆ ನೀಡುತ್ತದೆ.
ಈ ವೈಶಿಷ್ಟ್ಯವನ್ನು ಆಂಡ್ರಾಯ್ಡ್ ಹಾಗೂ ಐಫೋನ್‌ಗಳಲ್ಲಿ ಬಳಕೆದಾರರ ಗೌಪ್ಯತೆಯನ್ನು ಕಾಪಾಡುವ ಉದ್ದೇಶದಿಂದ ಪರಿಚಯಿಸಲಾಗಿದೆ. ಹಿಂದೆ ಕೆಲವು ಆ್ಯಪ್‌ಗಳು ಬಳಕೆದಾರರ ಅರಿವಿಲ್ಲದೆ ಕ್ಯಾಮೆರಾ ಅಥವಾ ಮೈಕ್ರೋಫೋನ್ ಬಳಸುತ್ತಿವೆಯೇ ಎಂಬ ಆತಂಕ ಇತ್ತು. ಈಗ ಹಸಿರು ಚುಕ್ಕೆ ಕಾಣಿಸಿದರೆ ಆ ಕ್ಷಣದಲ್ಲಿ ಯಾವುದೋ ಆ್ಯಪ್ ಈ ಸೌಲಭ್ಯಗಳನ್ನು ಬಳಸುತ್ತಿದೆ ಎಂಬುದು ಸ್ಪಷ್ಟವಾಗುತ್ತದೆ.
ಆದರೆ, ನೀವು ಯಾವುದೇ ಕರೆ ಮಾಡದೇ, ಕ್ಯಾಮೆರಾ ಬಳಸದೇ ಇದ್ದರೂ ಹಸಿರು ಚುಕ್ಕೆ ನಿರಂತರವಾಗಿ ಕಾಣಿಸುತ್ತಿದ್ದರೆ ಎಚ್ಚರಿಕೆಯಿಂದಿರಬೇಕು. ಯಾವ ಆ್ಯಪ್ ಕ್ಯಾಮೆರಾ ಅಥವಾ ಮೈಕ್ರೋಫೋನ್ ಬಳಸುತ್ತಿದೆ ಎಂಬುದನ್ನು ಪರಿಶೀಲಿಸಿ, ಅಗತ್ಯವಿಲ್ಲದ ಅನುಮತಿಗಳನ್ನು ತೆಗೆದುಹಾಕುವುದು ಉತ್ತಮ.
ಹೀಗಾಗಿ, ಮೊಬೈಲ್‌ನಲ್ಲಿ ಕಾಣುವ ಹಸಿರು ಚುಕ್ಕೆ ಭಯಪಡುವ ವಿಷಯವಲ್ಲ. ಅದು ನಿಮ್ಮ ಖಾಸಗಿತನವನ್ನು ಕಾಪಾಡಲು ಫೋನ್ ನೀಡುವ ಒಂದು ಚಿಕ್ಕದಾದರೂ ಮಹತ್ವದ ಭದ್ರತಾ ಸಂದೇಶವಾಗಿದೆ. ಸಣ್ಣ ಹಸಿರು ಚುಕ್ಕೆ ನಿಮ್ಮ ಡಿಜಿಟಲ್ ಸುರಕ್ಷತೆಯ ಕಾವಲುಗಾರ ಎಂದರೆ ತಪ್ಪಾಗಲಾರದು.