ಕಾರವಾರದ ಕೋಡಿಭಾಗ ಹಾಗೂ ಸುತ್ತಲಿನ ಪ್ರದೇಶದಲ್ಲಿ ಸಣ್ಣ ಪ್ರಮಾಣದ ಮಳೆಯಾಗಿದ್ದು, ಆ ಪ್ರದೇಶ ಕೆಂಪು ಸಮುದ್ರದ ಹಾಗೇ ಭಾಸವಾಗುತ್ತಿದೆ. ಹೆಂಜಾ ನಾಯ್ಕ ಪುತ್ಥಳಿ ಎಡಭಾಗದ ಕಿರಿದಾದ ರಸ್ತೆಯಲ್ಲಿ ನೀರು ನಿಂತಿದ್ದು, ಅಲ್ಲಿ ಅಳವಡಿಸಿದ ಕಪೌಂಡ್ ಸಹ ಮಳೆಯಲ್ಲಿ ನೆನೆದು ಕುಸಿಯುವ ಆತಂಕ ಶುರುವಾಗಿದೆ.
ADVERTISEMENT
ಈ ಭಾಗದಿಂದ ಓಡಾಡುವ ಶಾಲಾ-ಕಾಲೇಜು ಮಕ್ಕಳು ಕಪೌಂಡ್ ಹಿಡಿದು ನಡೆಯುತ್ತಿದ್ದಾರೆ. ಕಿರಿದಾದ ರಸ್ತೆಯ ಗಟಾರದಲ್ಲಿ ದೊಡ್ಡ ಪ್ರಮಾಣದಲ್ಲಿ ಕಸ ತುಂಬಿದ್ದು, ಅದನ್ನು ಸ್ವಚ್ಛಗಳಿಸದಿರುವುದೇ ಸಮಸ್ಯೆಗೆ ಕಾರಣ ಎಂದು ಜನ ದೂರಿದ್ದಾರೆ. `ನಗರಸಭೆಗೆ ಮನವಿ ಮಾಡಿದರೂ ಗಟಾರದಲ್ಲಿನ ಹೂಳು ತೆಗೆದಿಲ್ಲ. ಮಳೆಗಾಲದ ಮುನ್ನಚ್ಚರಿಕೆ ಕ್ರಮವನ್ನು ಅನುಸರಿಸಿಲ್ಲ. ಪ್ರತಿ ವರ್ಷ ಇದೇ ಸಮಸ್ಯೆ ಪುನರಾವರ್ತನೆಯಾಗುತ್ತಿದ್ದರೂ ಅದನ್ನು ಕೇಳುವವರಿಲ್ಲ’ ಎಂಬುದು ಅಲ್ಲಿನ ನಿವಾಸಿಗಳ ಅಳಲು.
ಉಚಿತ ಬಂಜೆತನ ತಪಾಸಣಾ ಶಿಬಿರ - ಜೂನ್ 23, 2026
ಸ್ಥಳ: ಹೈಟೆಕ್ ರಕ್ತ ತಪಾಸಣಾ ಕೇಂದ್ರ & ಪಾಲಿ ಕ್ಲಿನಿಕ್ ಅಂಕೋಲಾ | ನೋವಾ ಐವಿಎಫ್
ADVERTISEMENT
`ನಿತ್ಯ ಇಲ್ಲಿನ ಕೊಳಚೆ ನೀರಿನಲ್ಲಿ ಓಡಾಡುವ ಮಕ್ಕಳ ಕಾಲುಗಳಿಗೆ ನಂಜು ಆಗುತ್ತಿದೆ. ಕಾಲು ಕೊಳೆತ ಅನುಭವದಿಂದ ಮಕ್ಕಳು ಶಾಲೆಗೆ ಹೋಗಲು ಹೆದರುತ್ತಿದ್ದಾರೆ. ಕಳೆದ 10 ದಿನಗಳಿಂದ ನಗರಸಭೆಯವರಿಗೆ ಸಮಸ್ಯೆ ಬಗ್ಗೆ ತಿಳಿಸಲಾಗುತ್ತಿದೆ. ಪದೇ ಪದೇ ವಾಟ್ಸಪ್ ಮೂಲಕವೂ ಮನವಿ ಮಾಡಲಾಗುತ್ತಿದೆ. ಆದರೆ, ಈವರೆಗೂ ಯಾರೂ ಭೇಟಿ ನೀಡಿಲ್ಲ. ಮಕ್ಕಳು ಓಡಾಡುವಾಗ ಕಪೌಂಡ್ ಬಿದ್ದು ಅನಾಹುತನಡೆದರೂ ಕೇಳುವವರಿಲ್ಲ’ ಎಂದು ಅಸಮಧಾನವ್ಯಕ್ತಪಡಿಸಿದರು. `ಕೂಡಲೇ ಇಲ್ಲಿನ ಸಮಸ್ಯೆ ಬಗೆಹರಿಸಬೇಕು. ರಾಡಿ ನೀರಿನಲ್ಲಿ ಓಡಾಡುವ ತಾಪತ್ರೆಯವನ್ನು ತಪ್ಪಿಸಬೇಕು’ ಎಂದು ಆ ಭಾಗದವರು ಒತ್ತಾಯಿಸಿದರು.