ಭಟ್ಕಳದ ಯಲ್ವಡಿಕವೂರಿನ ನಾರಾಯಣ ನಾಯ್ಕ ಅವರ ಮನೆ ಮುಂದಿನ ಬಾವಿಗೆ ಚಿರತೆ ಬಿದ್ದಿದ್ದು, ಅರಣ್ಯ ಸಿಬ್ಬಂದಿ ಕಾರ್ಯಾಚರಣೆಯಿಂದ ಆ ಚಿರತೆ ಬಾವಿಯಿಂದ ಮೇಲೆ ಬಂದಿದೆ. ಬಾವಿಗೆ ಬಿದ್ದರೂ ಜೀವ ಉಳಿಸಿಕೊಂಡ ಆ ಚಿರತೆ ನೂರಾರು ಜನರ ಸಮ್ಮುಖದಲ್ಲಿ ಕಾಡು ಸೇರಿದೆ.
ADVERTISEMENT
ಭಾನುವಾರ ನಾರಾಯಣ ನಾಯ್ಕ ಅವರು ತಮ್ಮ ಮನೆ ಬಳಿಯಿದ್ದಾಗ ಬಾವಿಯಿಂದ ಶಬ್ದ ಬರುವುದನ್ನು ಆಲಿಸಿದರು. ಆ ಸದ್ದು ಗಮನಿಸಲು ಅವರು ಸಮೀಪ ಹೋದಾಗ ಅಲ್ಲಿ ಚಿರತೆ ಕಾಣಿಸಿತು. ಮೂರು ವರ್ಷದ ಗಂಡು ಚಿರತೆ ಬಾವಿಯಿಂದ ಮೇಲೆ ಬರಲಾಗದೇ ಘರ್ಜಿಸುತ್ತಿರುವುದನ್ನು ನೋಡಿ ಅವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಗೋಕರ್ಣ ತದಡಿಯ ವನ್ಯಜೀವಿ ರಕ್ಷಕ ಅಶೋಕ ನಾಯ್ಕ, ಮಹೇಶ ನಾಯ್ಕ ಹಾಗೂ ನಾಗರಾಜ ಹರಿಕಾಂತ ಅವರು ಚಿರತೆ ಸೆರೆಹಿಡಯುವ ಕಾರ್ಯಾಚರಣೆಗಿಳಿದರು. ಅರಣ್ಯ ಸಿಬ್ಬಂದಿ ಅವರಿಗೆ ಸಹಕಾರ ನೀಡಿದ್ದು, ಸುರಕ್ಷತಾ ಕ್ರಮ ಅನುಸರಿಸಿ ಚಿರತೆಯನ್ನು ಮೇಲೆತ್ತಿದರು.
ಉಚಿತ ಬಂಜೆತನ ತಪಾಸಣಾ ಶಿಬಿರ - ಜೂನ್ 23, 2026
ಸ್ಥಳ: ಹೈಟೆಕ್ ರಕ್ತ ತಪಾಸಣಾ ಕೇಂದ್ರ & ಪಾಲಿ ಕ್ಲಿನಿಕ್ ಅಂಕೋಲಾ | ನೋವಾ ಐವಿಎಫ್
ADVERTISEMENT
ಚಿರತೆ ನೋಡಲು ಜನ ಬಾವಿ ಹತ್ತಿರ ಬಂದಿದ್ದು, ರಕ್ಷಣಾ ಕಾರ್ಯಾಚರಣೆಯಲ್ಲಿದ್ದವರು ಜನರನ್ನು ದೂರ ಸರಿಸಿದರು. ಅದಾಗಿಯೂ, ಬಾವಿಗೆ ಬಿದ್ದ ಚಿರತೆ ನೋಡಲು ನೂರಾರು ಜನ ಬರುತ್ತಲೇ ಇದ್ದರು. ಸಾಹಸದಿಂದ ಚಿರತೆ ಮೇಲೆತ್ತಲಾಗಿದ್ದು, ಅದು ಆರೋಗ್ಯವಾಗಿರುವುದನ್ನು ಅಧಿಕಾರಿಗಳು ದೃಢಪಡಿಸಿದರು. ನಂತರ ಆರ್‌ಎಫ್‌ಓ ವಿಶ್ವನಾಥ ನಾಯ್ಕ ಮುಂದಾಳತ್ವದಲ್ಲಿ ಚಿರತೆಯನ್ನು ಕಾಡಿಗೆ ಬಿಡಲಾಯಿತು. ಈ ಕಾರ್ಯಾಚರಣೆಯಲ್ಲಿ ಡಿಆರ್‌ಎಫ್‌ಒ ಮಾರುತಿ ಸೋರಗಾಂವಿ, ಅರಣ್ಯ ಸಿಬ್ಬಂದಿ ಮಹೇಶ ಅಜ್ಜರ, ನಾಗರಾಜ ನಾಯ್ಕ, ಸಂದೀಪ್ ಭಂಡಾರಿ ಹಾಗೂ ಸಿಬ್ಬಂದಿ ರಾಮಕೃಷ್ಣ ನಾಯ್ಕ, ಮಾದೇವ ನಾಯ್ಕ, ಕುಪ್ಪಯ್ಯ ಗೊಂಡ, ಮಹೇಶ ನಾಯ್ಕ, ಈಶ್ವರ ನಾಯ್ಕ, ವರುಣ್ ಚೌಹಾಣ್ ಇದ್ದರು.