ಸಿದ್ದಾಪುರದ ವಾಜಗೋಡ ಗ್ರಾಮ ಪಂಚಾಯತ ಕಚೇರಿಗೆ ಅರಣ್ಯವಾಸಿಗಳು ಆಗಮಿಸಿದ್ದು, ಅವರ ಪ್ರಶ್ನೆಗಳಿಗೆ ಪಿಡಿಓ ಗೌರೀಶ್ ಹೆಗಡೆ `ನಾನು ಹೋಗಿಲ್ಲ. ನಾನು ನೋಡಿಲ್ಲ. ನನಗೆನೂ ಗೊತ್ತಿಲ್ಲ. ಆದೇಶ ಪ್ರತಿ ಸಿಕ್ಕಿಲ್ಲ’ ಎಂದು ಉತ್ತರಿಸಿದ್ದಾರೆ. ಪಿಡಿಓ ಉತ್ತರ ಕೇಳಿ ಅತಿಕ್ರಮಣದಾರರು ಕೆಂಡಾಮoಡಲರಾಗಿದ್ದಾರೆ!
ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ತಿರಸ್ಕೃತ ಅರ್ಜಿದಾರರ ಸಾಗುವಳಿ ಕ್ಷೇತ್ರಕ್ಕೆ ಮಹಜರ್ ಪ್ರಕ್ರಿಯೆಯಲ್ಲಿನ ನ್ಯೂನ್ಯತೆಗಳ ಬಗ್ಗೆ ಪ್ರಶ್ನಿಸಲು ನೂರಾತು ಅತಿಕ್ರಮಣದಾರರು ಗ್ರಾಮ ಪಂಚಾಯತ ಕಚೇರಿಗೆ ಭೇಟಿ ನೀಡಿದ್ದಾರೆ. ತಮ್ಮ ಅನುಮಾನಗಳ ಬಗ್ಗೆ ಅತಿಕ್ರಮಣದಾರರು ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ. ಬಗೆ ಬಗೆಯ ಪ್ರಶ್ನೆಗಳಿಂದ ಕಂಗಾಲಾದ ಪಿಡಿಓ ಗಿರೀಶ ಹೆಗಡೆ ಅವರು `ಹೋಗಿಲ್ಲ.. ಮಾಡಿಲ್ಲ.. ನೋಡಿಲ್ಲ.. ಗೊತ್ತಿಲ್ಲ.. ಆದೇಶ ಪ್ರತಿ ಇಲ್ಲ’ ಎಂಬುದನ್ನು ಬಿಟ್ಟು ಬೇರೇನೂ ಮಾತನಾಡಿಲ್ಲ!
ಪಿಡಿಓ ನೀಡಿದ ಅಸ್ಪಷ್ಟ ಉತ್ತರ ಕೇಳಿ ಆಗಮಿಸಿದ ಜನ ಆಕ್ರೋಶವ್ಯಕ್ತಪಡಿಸಿದ್ದಾರೆ. ಹೋರಾಟಗಾರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಅವರು ಪಿಡಿಓವನ್ನು ತರಾಠೆಗೆ ತೆಗೆದುಕೊಂಡಿದ್ದಾರೆ. ಅತಿಕ್ರಮಣದಾರರ ಆಕ್ರೋಶ ನೋಡಿ ಗ್ರಾಮ ಲೆಕ್ಕಾಧಿಕಾರಿ ಪ್ರತಿಭಾ ಮರಾಠಿ ಅವರು ಕಂಗಾಲಾಗಿದ್ದಾರೆ. ಈ ವೇಳೆ ಪಿಸೈ ನಾಗಪ್ಪ ಬಿ ಅವರು ಮಧ್ಯ ಪ್ರವೇಶಿಸಿ ಆಕ್ರೋಶಭರತಿ ಅತಿಕ್ರಮಣದಾರರನ್ನು ಸಮಾಧಾನ ಮಾಡಿದ್ದಾರೆ.