ಶಿರಸಿ-ಸಿದ್ದಾಪುರ ಭಾಗದ ಹಾಸ್ಟೇಲಿನಲ್ಲಿ ನಡೆದ ಅಹಿತಕರ ಘಟನೆಯ ಬಗ್ಗೆ ಚರ್ಚಿಸಿದ ಶಾಸಕ ಭೀಮಣ್ಣ ನಾಯ್ಕ ಅವರು ಹಾಸ್ಟೇಲ್ ವಾರ್ಡನ್ ಹಾಗೂ ಶಿಕ್ಷಕರ ಬೇಜವಬ್ದಾರಿ ಬಗ್ಗೆ ಅಸಮಧಾನವ್ಯಕ್ತಪಡಿಸಿದ್ದಾರೆ. ವಸತಿ ನಿಲಯದಲ್ಲಿನ ವಿದ್ಯಾರ್ಥಿಗಳ ಸುರಕ್ಷತೆ ಹಾಗೂ ಮುಂಜಾಗ್ರತಾ ಕ್ರಮಗಳ ಬಗ್ಗೆ ಅವರು ಅಧಿಕಾರಿಗಳಿಗೂ ಪಾಠ ಮಾಡಿದ್ದಾರೆ.
`ಬಂಡಲ್ ಬಳಿಯ ವಸತಿ ನಿಲಯದಲ್ಲಿ ಬಾಲಕಿಯೊಬ್ಬಳು ಮಗುವಿಗೆ ಜನ್ಮ ನೀಡಿದ್ದು ಹಾಗೂ ಆ ಮಗುವನ್ನು ಶೌಚಾಲಯದಿಂದ ಎಸೆದು ಸಾಯಿಸಿದ್ದು ಅಮಾನವೀಯ ಕೃತ್ಯ. ಸಿದ್ದಾಪುರದ ಇಂದಿರಾಗಾoಧಿ ವಸತಿ ನಿಲಯದಲ್ಲಿ ವಿದ್ಯಾರ್ಥಿ ಆತ್ಮಹತ್ಯೆಯೂ ಅತ್ಯಂತ ಗಂಭೀರ ವಿಷಯ. ಈ ಎರಡೂ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಯಬೇಕಿದ್ದು, ತಪ್ಪು ಮಾಡಿದವರಿಗೆ ಶಿಕ್ಷೆ ಖಚಿತ’ ಎಂದು ಭೀಮಣ್ಣ ನಾಯ್ಕ ಅವರು ಹೇಳಿದ್ದಾರೆ.
`ಶಿರಸಿ ಮತ್ತು ಸಿದ್ದಾಪುರ ತಾಲೂಕಿನ ವಸತಿ ಶಾಲೆ ಮತ್ತು ವಿವಿಧ ಇಲಾಖೆಗಳ ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳ ಸುರಕ್ಷತೆಗೆ ಒತ್ತು ಕೊಡಬೇಕು’ ಎಂದವರು ಸೂಚನೆಯನ್ನು ನೀಡಿದ್ದಾರೆ. ಈ ಸಭೆಯಲ್ಲಿ ಉಪವಿಭಾಗಾಧಿಕಾರಿ ಚಂದ್ರಶೇಖರ ಆರ್ ಜೆ, ತಹಶಿಲ್ದಾರರ ಪಟ್ಟರಾಜ ಗೌಡ, ಡಿವಾಯೆಸ್ಪಿ ಗೀತಾ ಪಾಟಿಲ್, ಪಿಐ ಸಂಪತಕುಮಾರ,ಪೌರಾಯುಕ್ತರಾದ ಪ್ರಕಾಶ ಚನ್ನಪ್ಪನವರ್, ಪ್ರಮುಖರಾದ ಉಮಾ ಉಗ್ರಾಣಕರ್ ಅವರು ಹಾಜರಿದ್ದು ಅಭಿಪ್ರಾಯ ಮಂಡಿಸಿದ್ದಾರೆ.