ಹಳಿಯಾಳದಲ್ಲಿ ದಾದಾಗಿರಿ ಮಾಡಿಯೇ ಬದುಕು ಕಟ್ಟಿಕೊಂಡ ಮಂಜುನಾಥ ಬೇಕನಿ (ಮಚ್ಚ್ ಮಂಜ) ಅವರು ಮೌರ್ಯ ಹೊಟೇಲಿನಲ್ಲಿ ಗಲಾಟೆ ಮಾಡಿದ್ದಾರೆ. ಕಂಠಪೂರ್ತಿ ಕುಡಿದ ಅಮಲಿನಲ್ಲಿ ಗಲಾಟೆ ತಡೆಯಲು ಬಂದ ಪೊಲೀಸರನ್ನೇ ಹೆದರಿಸಿದ್ದಾರೆ!
ಜೂನ್ 14ರ ರಾತ್ರಿ ಮೌರ್ಯ ಹೊಟೇಲಿನಲ್ಲಿ ಗಲಾಟೆ ನಡೆದಿದೆ. ಹೊಟೇಲ್ ಮುಂದಿನ ಪಾನ್ ಅಂಗಡಿ ಎದುರು ರಾಘವೇಂದ್ರ ದತ್ತಾ ಬಾಂದೇಕರ್ ಹಾಗೂ ಮಂಜುನಾಥ ಸುಬ್ರಾಯ ಬೇಕನಿ ಗಲಾಟೆ ಮಾಡಿಕೊಂಡಿದ್ದಾರೆ. ಅದನ್ನು ನೋಡಿದ ಹೊಟೇಲ್ ಸಿಬ್ಬಂದಿ ಬಸವರಾಜ ಹಾಗೂ ರಾಘವೇಂದ್ರ ಗಲಾಟೆ ತಪ್ಪಿಸುವ ಪ್ರಯತ್ನ ಮಾಡಿದ್ದಾರೆ. ಆಗ, ಹೊಟೇಲ್ ಮ್ಯಾನೇಜರ್ ಸದಾಶಿವ ಪೂಜಾರಿ ಅವರು ಅಲ್ಲಿಗೆ ಆಗಮಿಸಿದ್ದು, ಅವರ ಮೇಲೆಯೂ ಮಂಜುನಾಥ ಬೇಕನಿ ಹಲ್ಲೆ ಮಾಡಿದ್ದಾರೆ.
ಈ ಗಲಾಟೆಯಲ್ಲಿ ದತ್ತಾ ಬಾಂದೇಕರ್ ಅವರ ಪಾನ್ ಶಾಪಿನಲ್ಲಿದ್ದ ಚಾಕಲೇಟು ಡಬ್ಬಿಗಳು ಒಡೆದಿವೆ. ಅಲ್ಲಿದ್ದ ಒಂದು ಡಬ್ಬಿಯಿಂದಲೇ ಮಂಜುನಾಥ ಬೇಕನಿ ಜನರ ಮೇಲೆ ಹಲ್ಲೆ ಮಾಡಿದ್ದಾರೆ. ವಿಷಯ ತಿಳಿದು ಪೊಲೀಸರು ಅಲ್ಲಿಗೆ ಆಗಮಿಸಿದ್ದು, ಪೊಲೀಸರ ಮೇಲೆಯೂ ಮಂಜುನಾಥ ಬೇಕನಿ ದಾಳಿ ಪ್ರಯತ್ನ ಮಾಡಿದ್ದಾರೆ. ಆ ವೇಳೆ ಪೊಲೀಸರು ಅಲ್ಲಿಂದ ಸುಮ್ಮನೆ ಹೋಗಿದ್ದು, ಅದಾದ ನಂತರ ಬಾರ್ ಮ್ಯಾನೇಜರ್ ನೀಡಿದ ದೂರಿನ ಅನ್ವಯ ಪ್ರಕರಣವೊಂದನ್ನು ದಾಖಲಿಸಿದ್ದಾರೆ.