ಶಿರಸಿ-ಸಿದ್ದಾಪುರದ ಹಳ್ಳಿ ಹಳ್ಳಿಗಳಲ್ಲಿ ಹೆಂಡ ಮಾರಾಟ ಮಾಡುವುದನ್ನು ವಿರೋಧಿಸಿ ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ ಅವರು ಹೋರಾಟ ನಡೆಸಿದ್ದಾರೆ. ಒಂದು ತಿಂಗಳಿನ ಒಳಗೆ ಅಕ್ರಮಗಳಿಗೆ ಕಡಿವಾಣ ಹಾಕದೇ ಇದ್ದರೆ ಇನ್ನಷ್ಟು ಉಗ್ರ ಹೋರಾಟ ನಡೆಸುವುದಾಗಿ ಅವರು ಎಚ್ಚರಿಸಿದ್ದಾರೆ. ಈ ಹೋರಾಟಕ್ಕೆ ನೂರಾರು ಜನ ಕೈ ಜೋಡಿಸಿದ್ದಾರೆ.
ಶಿರಸಿ ಎಸಿ ಕಚೆರಿ ಎದುರು ಶಾಸಕ ಭೀಮಣ್ಣ ನಾಯ್ಕ ಅವರನ್ನು ಗುರಿಯಾಗಿರಿಸಿಕೊಂಡು ಅನಂತಮೂರ್ತಿ ಹೆಗಡೆ ಅವರು ಈ ವೇಳೆ ಭಾಷಣ ಮಾಡಿದ್ದಾರೆ. `ಹೆಂಡ ಕುಡಿಯುವುದೇ ತಪ್ಪು. ಅದರಲ್ಲಿಯೂ ಹಳ್ಳಿ ಹಳ್ಳಿಗಳಲ್ಲಿ ಹೆಂಡ ಮಾರಾಟ ಮಾಡುತ್ತಿರುವುದು ಇನ್ನೂ ದೊಡ್ಡ ತಪ್ಪು’ ಎಂದು ಅನಂತಮೂರ್ತಿ ಹೆಗಡೆ ಅವರು ಹೇಳಿದ್ದಾರೆ. `ಗ್ರಾಮೀಣ ಭಾಗದಲ್ಲಿ ಸಿಗುವ ಸರಾಯಿ ಗುಣಮಟ್ಟದಿಂದ ಕೂಡಿಲ್ಲ. ಅದರ ಸೇವನೆಯಿಂದ ಅಂಗಾoಗಗಳ ಮೇಲೆ ದುಷ್ಪರಿಣಾಮ ಆಗಲಿದೆ. ಆರೋಗ್ಯ ಹಾಗೂ ಆರ್ಥಿಕ ನಷ್ಟಕ್ಕೆ ಸರಾಯಿ ಕಾರಣವಾಗಿದ್ದು, ಈ ಸರಾಯಿ ಸೇವನೆಯಿಂದ ಅನೇಕರು ಸಾವನಪ್ಪಿದ್ದಾರೆ’ ಎಂದು ವಿವರಿಸಿದರು. ಅದರಂತೆ, `ಗಾಂಜಾ ಸೇವನೆ-ಮಾರಾಟವನ್ನು ತಡೆಯಬೇಕು. ವಿದ್ಯಾರ್ಥಿಗಳು ಹಾಗೂ ಯುವ ಜನ ಹಾಳಾಗದ ಹಾಗೇ ಎಚ್ಚರಿಕೆವಹಿಸಬೇಕು’ ಎಂದು ಆಗ್ರಹಿಸಿದ್ದಾರೆ.
ಸಿದ್ದಾಪುರ ಬಿಜೆಪಿ ಮಂಡಲ ಅಧ್ಯಕ್ಷ ಎಂ ಕೆ ತಿಮ್ಮಪ್ಪ, ಪ್ರಮುಖರಾದ ಮಹಾಂತೇಶ ಹಾದಿಮನಿ, ಜ್ಯೋತಿ ಭಟ್, ಸುರೇಶ ನಾಯ್ಕ, ಮಾರುತಿ ನಾಯ್ಕ್ ಹೊಸೂರ್, ಗಣೇಶ ಕ್ಷತ್ರಿಯ ಮೊದಲಾದವರು ಮಾತನಾಡಿ ಸರಾಯಿ ಹಾಗೂ ಗಾಂಜಾ ಮಾರಾಟದ ದುಷ್ಪರಿಣಾಮಗಳ ಬಗ್ಗೆ ಹೇಳಿದ್ದಾರೆ. `ಅಕ್ರಮ ಸರಾಯಿ ಮಾರಾಟಗಾರರು ಹಾಗೂ ಗಾಂಜಾ ಪ್ರಕರಣದಲ್ಲಿ ಸಿಕ್ಕಿ ಬೀಳುವವರನ್ನು ಪೊಲೀಸರು ಒಮ್ಮೆ ಹಿಡಿದು ಬಿಡುತ್ತಿದ್ದು, ಅವರ ವಿರುದ್ಧ ಕಠಿಣ ಕ್ರಮವಾಗಬೇಕು’ ಎಂದು ಆಗ್ರಹಿಸಿದ್ದಾರೆ. ಅಕ್ರಮ ಸರಾಯಿ ಮಾರಾಟದಿಂದ ಸಮಸ್ಯೆ ಅನುಭವಿಸಿದ ವಿ ಎಮ್ ಭಟ್, ಅಣ್ಣಪ್ಪ ಹಸ್ಲರ್, ಶ್ರೀಕಾಂತ್ ಬಳ್ಳಾರಿ, ಹರೀಶ್ ಪಾಲೇಕರ್, ವಿನಾಯಕ ನಾಯ್ಕ್, ಅನಸೂಯ ಹೆಗಡೆ, ಯುವರಾಜ ಗೌಡ ಸಂತೋಳ್ಳಿ,, ಮಂಜುನಾಥ ನಾಯ್ಕ್, ರಾಘವೇಂದ್ರ ನಾಯ್ಕ್, ಶಂಕರ್ ಹೆಗಡೆ, ಕೃಷ್ಣಮೂರ್ತಿ ಐಸೂರ್, ಗಣಪತಿ ಹೆಗಡೆ, ಶ್ರೀಪಾದ್ ಹೆಗಡೆ, ನಾರಾಯಣ ಹೆಗಡೆ, ಮಹೇಂದ್ರ ಭಟ್, ಜಿ ಎಸ್ ಹೆಗಡೆ, ಮಂಜುನಾಥ ಪಾಟೀಲ್, ಪ್ರದೀಪ್ ಹೆಗಡೆ, ಉಪೇಂದ್ರ ಮೇಸ್ತ, ಉಷಾ ಹೆಗಡೆ, ರಮೇಶ ಕುಪ್ಪಳ್ಳಿ ಇತರರು ಇದ್ದರು.