ಕುಮಟಾ ದೀವಗಿಯ ಶ್ರೀಮಾತಾ ಡೆಕೋಟೇರರ್ಸನ ಪ್ರವೀಣ ಅಂಬಿಗ ಅವರು ಮಿರ್ಜಾನಿನ ಚಾಲಕ ಲಕ್ಷಿನಾರಾಯಣ ನಾಯ್ಕ ಹಾಗೂ ಮುಗ್ವೇನವಾಡಿಯ ಕಾರ್ಮಿಕ ಶಿವಾನಂದ ನಾಯ್ಕ ಅವರಿಗೂ ಜೂಜಾಟ ಕಲಿಸಿದ್ದಾರೆ. ಚಾಲಕ ಹಾಗೂ ಕಾರ್ಮಿಕರನ್ನು ಬಳಸಿಕೊಂಡು ಅವರು ಹಣ ಹೂಡಿ ಇಸ್ಪಿಟ್ ಆಡುವಾಗ ಪೊಲೀಸರ ಬಳಿ ಸಿಕ್ಕಿ ಬಿದ್ದಿದ್ದಾರೆ.
ಕುಮಟಾದ ದೀವಗಿಯಲ್ಲಿ ವಾಸವಾಗಿರುವ ಪ್ರವೀಣ ತಿಮ್ಮಪ್ಪ ಅಂಬಿಗ ಅವರು ಶ್ರೀಮಾತಾ ಡೆಕೋಟೇರರ್ಸ ನಡೆಸುತ್ತಾರೆ. 34 ವರ್ಷದ ಅವರು ದುಡಿದ ಹಣ ಡಬಲ್ ಮಾಡುವ ಆಸೆಯಿಂದ ಇನ್ನಿತರ ಕಾರ್ಮಿಕರನ್ನು ಜೂಜಾಟಕ್ಕೆ ಆಮಂತ್ರಿಸುತ್ತಾರೆ. ಮಿರ್ಜಾನ್ ಭೈರವೇಶ್ವರಕೇರಿಯ ಚಾಲಕ ಲಕ್ಷಿನಾರಾಯಣ ರಾಮಕೃಷ್ಣ ನಾಯ್ಕ (47) ಹಾಗೂ ಮುಗ್ವೇನವಾಡಿಯ ಕೂಲಿ ಕಾರ್ಮಿಕ ಶಿವಾನಂದ ನಾರಾಯಣ ನಾಯ್ಕ (60) ಅವರು ಸಹ ಜೂಜಾಟ ಚಟ ಹೊಂದಿದವರಾಗಿದ್ದು, ಈ ಮೂವರು ಸೇರಿ ಇಸ್ಪಿಟ್ ಆಡುತ್ತಾರೆ. ಒಬ್ಬರಿಗೆ ಲಾಭ ಹಾಗೂ ಮತ್ತೊಬ್ಬರಿಗೆ ನಷ್ಟ ಆಗುವ ರೀತಿ ಅವರೆಲ್ಲರೂ ಹಣ ಹೂಡಿ ಆಟವಾಡುತ್ತಿದ್ದು, ಹಣ ಹೂಡಿದವರ ವಿರುದ್ಧ ಪೊಲೀಸರು ಕ್ರಮ ಜರುಗಿಸಿದ್ದಾರೆ.
ಜೂನ್ 14ರಂದು ಶ್ರೀಮಾತಾ ಡೆಕೋಟೇರರ್ಸನ ಪ್ರವೀಣ ಅಂಬಿಗ ಅವರು ಮಿರ್ಜಾನಿನ ಚಾಲಕ ಲಕ್ಷಿನಾರಾಯಣ ನಾಯ್ಕ ಹಾಗೂ ಮುಗ್ವೇನವಾಡಿಯ ಕಾರ್ಮಿಕ ಶಿವಾನಂದ ನಾಯ್ಕ ಅವರನ್ನು ಆಮಂತ್ರಿಸಿದ್ದಾರೆ. ಅವರಿಬ್ಬರನ್ನು ಮಿರ್ಜಾನ್ ಗ್ರಾಮದ ಟೂರಿಸ್ಟ್ ಹೊಟೇಲ್ ಬಳಿ ಕರೆದೊಯ್ದು ಜೂಜಾಟ ನಡೆಸಿದ್ದಾರೆ. ಕುಮಟಾ ಪಿಸೈ ಖಾದರ್ ಭಾಷಾ ಅವರಿಗೆ ಈ ಬಗ್ಗೆ ವ್ಯಕ್ತಿಯೊಬ್ಬರು ಮಾಹಿತಿ ನೀಡಿದ್ದಾರೆ. ಹೀಗಾಗಿ ಖಾದರ್ ಭಾಷಾ ಅವರು ದಿಢೀರ್ ಆಗಿ ಆ ಮೂವರ ಮೇಲೆ ದಾಳಿ ಮಾಡಿದ್ದಾರೆ. ಆಗ, ಅವರೆಲ್ಲರೂ 2830ರೂ ಹರಡಿಕೊಂಡು ಇಸ್ಪಿಟ್ ಆಟ ಆಡುತ್ತಿರುವುದು ಕಾಣಿಸಿದೆ. ತಕ್ಷಣ ಅವರೆಲ್ಲರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿ, ಕಾನೂನು ಕ್ರಮ ಜರುಗಿಸಿದ್ದಾರೆ.