ಹೊನ್ನಾವರದ ಕೆಳಗಿನ ಮೂಡ್ಕಣಿಯ ಶರಾವತಿ ನದಿ ಕೋಡಿ ಪ್ರದೇಶದಲ್ಲಿ ಕೋಳಿ ಅಂಕ ನಡೆದಿದೆ. ಕೋಳಿಗಳ ಕಾಲಿಗೆ ಕತ್ತಿ ಕಟ್ಟಿದ ಕೆಲವರು ಅವುಗಳನ್ನು ಕಾದಾಟಕ್ಕೆ ಬಿಟ್ಟಿದ್ದಾರೆ.
Advertisement. Scroll to continue reading.
ಮೂಡ್ಕಣಿ ಕೇವವಳ್ಳಿ ಬೇಕರಿ ಕೆಲಸ ಮಾಡುವ ವಿಲಿಯಂ ಸಂತಾನ ಮಿರಂಡಾ ಕೋಳಿ ಅಂಕದ ಆಯೋಜಕರಾಗಿದ್ದಾರೆ. ಜಲವಳ್ಳಿ ಪ್ರಭಾತಕೇರಿಯ ಮಂಜುನಾಥ ಗಣಪಯ್ಯ ನಾಯ್ಕ, ಶ್ರೀಪಾದ ಮಂಜುನಾಥ ನಾಯ್ಕ, ಕೆರವಳ್ಳಿಯ ಸಮರ್ಥ ಶ್ರೀಧರ ನಾಯ್ಕ, ಜಲವಳ್ಳಿಯ ಭರತ್ ಹಳ್ಳೇರ್ ಅವರು ಈ ಆಟದಲ್ಲಿ ಹಣ ಹೂಡಿಕೆ ಮಾಡಿದ್ದಾರೆ. ಗೆದ್ದ ಕೋಳಿ ಮೇಲೆ ಹಣ ಹೂಡಿ ಲಾಭಪಡೆಯುವ ಉದ್ದೇಶಹೊಂದಿದ್ದ ಅವರೆಲ್ಲರ ಲೆಕ್ಕಾಚಾರ ಉಲ್ಟಾ ಆಗಿದೆ.
ಜೂನ್ 18ರ ರಾತ್ರಿ 11.45ಕ್ಕೆ ಮೂಡ್ಕಣಿ ಶರಾವತಿ ನದಿಯ ಕೋಡಿ ಹತ್ತಿರ ಕೋಳಿ ಅಂಕ ನಡೆದ ಬಗ್ಗೆ ಹೊನ್ನಾವರ ಪೊಲೀಸ್ ನಿರೀಕ್ಷಕ ಸಿದ್ಧರಾಮೇಶ್ವರ ಎಸ್ ಅವರಿಗೆ ಫೋನ್ ಬಂದಿದೆ. ತಕ್ಷಣ ತಮ್ಮ ತಂಡದೊAದಿಗೆ ಅವರು ಅಲ್ಲಿ ದಾಳಿ ಮಾಡಿದ್ದಾರೆ. ಆಗ, ಅಲ್ಲಿದ್ದ ಅನೇಕರು ಓಡಿ ಹೋಗಿದ್ದಾರೆ. ಅದಾಗಿಯೂ ಬೆನ್ನು ಬಿದ್ದ ಪೊಲೀಸರು ವಿಲಿಯಂ ಸಂತಾನ ಮಿರಂಡಾ ಅವರ ಜೊತೆ ಮಂಜುನಾಥ ಗಣಪಯ್ಯ ನಾಯ್ಕ, ಶ್ರೀಪಾದ ಮಂಜುನಾಥ ನಾಯ್ಕ, ಸಮರ್ಥ ಶ್ರೀಧರ ನಾಯ್ಕ, ಭರತ್ ಹಳ್ಳೇರ್ ಅವರನ್ನು ವಶಕ್ಕೆಪಡೆದಿದ್ದಾರೆ.
ಕೋಳಿ ಅಂಕದ ಸ್ಥಳದಲ್ಲಿ ಒಂದು ಹುಂಜ, ಅದರ ಕಾಲಿಗೆ ಕಟ್ಟಿದ್ದ ಕತ್ತಿ ಹಾಗೂ 2460ರೂ ಹಣ ಪೊಲೀಸರಿಗೆ ಸಿಕ್ಕಿದೆ. ಕಾನೂನುಬಾಹಿರ ಕ್ರೀಡೆಯಲ್ಲಿ ಭಾಗಿಯಾದವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿ, ಕಾನೂನು ಕ್ರಮ ಜರುಗಿಸಿದ್ದಾರೆ.