ಕುಮಟಾದ ಕೃಷಿಕ ಎನ್ ಡಿ ಹೆಗಡೆ ಅವರ ಕಡಸಾಲಗದ್ದೆ ತೋಟಕ್ಕೆ ಹೋಗಿದ್ದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಅಲ್ಲಿನ ಕೃಷಿ ಕಾರ್ಯಗಳನ್ನು ನೋಡಿ ಖುಷಿ ಹಂಚಿಕೊoಡಿದ್ದಾರೆ. ಅದಾದ ನಂತರ ಅಲ್ಲಿದ್ದ ಕಾಳು ಮೆಣಸಿನ ಗಿಡಕ್ಕೆ ರಸಸಾರ ಉಣಿಸುವ ಮೂಲಕ ಅವರು ನೈಸರ್ಗಿಕ ಕೃಷಿ ಕಾರ್ಯಾಗಾರಕ್ಕೆ ಚಾಲನೆ ನೀಡಿದ್ದು, ಸಾಧಕ ಕೃಷಿಕರನ್ನು ಸನ್ಮಾನಿಸಿದ್ದಾರೆ.
ADVERTISEMENT
ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಅನಂತಮೂರ್ತಿ ಹೆಗಡೆ ಅವರು ಈಚೆಗೆ ಎನ್ ಡಿ ಹೆಗಡೆ ಅವರ ತೋಟಕ್ಕೆ ಭೇಟಿ ನೀಡಿದ್ದರು. ಅಲ್ಲಿಯೇ ನೈಸರ್ಗಿಕ ಕೃಷಿ ಕಾರ್ಯಾಗಾರ ನಡೆಸಲು ಅವರು ನಿರ್ಣಯಿಸಿದ್ದರು. ಅದರ ಪ್ರಕಾರ, ಕೃಷಿ ಕಾರ್ಯಾಗಾರಕ್ಕೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಆಮಂತ್ರಿಸಿದ್ದು ಕಾರ್ಯಕ್ರಮಕ್ಕೆ ಭೇಟಿ ನೀಡಿದ್ದ ಕಾಗೇರಿಯವರು ತೋಟ ಸುತ್ತಾಡಿದರು. `ಎಷ್ಟೇ ಪ್ರಮಾಣದಲ್ಲಿ ಐಟಿ-ಬಿಟಿ ಕಂಪನಿ ಬೆಳೆದರೂ ಊಟ ಮಾಡಲು ಅನ್ನ ಬೇಕು. ಅಕ್ಕಿ ಬೆಳೆಯಲು ರೈತ ಬೇಕೇ ಬೇಕು’ ಎಂದು ಈ ವೇಳೆ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಹೇಳಿದರು.
ಉಚಿತ ಬಂಜೆತನ ತಪಾಸಣಾ ಶಿಬಿರ - ಜೂನ್ 23, 2026
ಸ್ಥಳ: ಹೈಟೆಕ್ ರಕ್ತ ತಪಾಸಣಾ ಕೇಂದ್ರ & ಪಾಲಿ ಕ್ಲಿನಿಕ್ ಅಂಕೋಲಾ | ನೋವಾ ಐವಿಎಫ್
ADVERTISEMENT
`ಈಚೆಗೆ ಕೃಷಿ ಕ್ಷೇತ್ರವು ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ರೈತರು ಸಾವಯವ ಕೃಷಿಯನ್ನು ಅವಲಂಬಿಸಬೇಕು ಎನ್ನುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದಾರೆ’ ಎಂದರು. `ಕೇಂದ್ರ ಸರ್ಕಾರದ ಪಿ ಎಂ ಪ್ರಣಾಮ್ ಯೋಜನೆ ಹಾಗೂ ಖೇತ್ ಬಚಾವೋ ಯೋಜನೆ ಅಡಿ ಅಭಿಯಾನ ನಡೆಸಲಾಗಿದ್ದು, ಸಮಾಜದ ಹಿತ ಕಾಯಲು ನಾವೆಲ್ಲರೂ ನೈಸರ್ಗಿಕ ಕೃಷಿಯತ್ತ ಸಾಗಬೇಕು” ಎಂದು ಅವರು ಕರೆ ನೀಡಿದರು. ಶಾಸಕ ದಿನಕರ ಶೆಟ್ಟಿ ಮಾತನಾಡಿ `ಅಂತ್ರವಳ್ಳಿಯಲ್ಲಿ ಎನ್ ಡಿ ಹೆಗಡೆಯವರು 20 ಎಕರೆ ಜಾಗದಲ್ಲಿ ಅತ್ಯುತ್ತಮವಾಗಿ ಕಾಳುಮೆಣಸು ಮತ್ತು ಅಡಿಕೆಯನ್ನು ಬೆಳೆದಿದ್ದಾರೆ. ರಾಸಾಯನಿಕ ಮುಕ್ತ ಸಾವಯವ ಕೃಷಿಯಿಂದಲೂ ಇಳುವರಿಪಡೆಯಲು ಸಾಧ್ಯ’ ಎಂದು ತೋರಿಸಿದ್ದಾರೆ’ ಎಂದರು. ನೈಸರ್ಗಿಕ ಪದ್ಧತಿಯಿಂದಲೇ 50 ಎಕರೆಯಲ್ಲಿ 500 ಕ್ವಿಂಟಲ್ ಕಾಳು ಮೆಣಸು ಬೆಳೆದಿರುವುದಾಗಿ ಎನ್ ಡಿ ಹೆಗಡೆ ಅವರು ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಎನ್ ಎಸ್ ಹೆಗಡೆ, ಬಿಜೆಪಿ ರೈತಮೋರ್ಚಾ ಜಿಲ್ಲಾಧ್ಯಕ್ಷ ಅನಂತಮೂರ್ತಿ ಹೆಗಡೆ ಅವರು ಮಾತನಾಡಿದರು. ವಿವಿಧ ಕೃಷಿ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿದ ನಾಗು ಗೌಡ ಕಡ್ನೀರು, ಸಂತೋಷ ಹೆಗಡೆ ಶಿರಸಿ, ವಿಷ್ಣು ಜಟ್ಟು ಗೌಡ ಮೂರೂರು, ಲಕ್ಷ್ಮೀನಾರಾಯಣ ಹೆಗಡೆ ಕಲ್ಲಬ್ಬೆ, ಮಂಜುನಾಥ ಬೀರಾ ಗೌಡ ಕಂದೊಳ್ಳಿ, ಎನ್ ಡಿ ಹೆಗಡೆ, ನಾಗರಾಜ ನಾಯ್ಕ ಕಾಗಲ ಸೇರಿದಂತೆ ಹಲವರನ್ನು ಸನ್ಮಾನಿಸಿದರು. ಕುಮಟಾ ಬಿಜೆಪಿ ಮಂಡಲಾಧ್ಯಕ್ಷರಾದ ಗಣಪತಿ ಹೆಗಡೆ, ಪ್ರಮುಖರಾದ ಕುಮಾರ ಭಟ್, ಗಜಾನನ ಪೈ, ಡಾ ಜಿ ಜಿ ಹೆಗಡೆ, ವಿಷ್ಣ್ಣುಮೂರ್ತಿ ಹೆಗಡೆ ಇತರರಿದ್ದರು. `ಬಿಜೆಪಿ ರೈತ ಮೋರ್ಚಾ ಉತ್ತರ ಕನ್ನಡ ಘಟಕವು ಇಂತಹ ಉತ್ತಮ ಕಾರ್ಯಾಗಾರ ಆಯೋಜಿಸಿರುವುದು ಶ್ಲಾಘನೀಯ’ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.