ಪತ್ನಿಯ ಕಿರುಕುಳ ಸಹಿಸಲಾಗದೇ ಶಿರಸಿಯ ಎಲ್ ಕೆ ಹೆಗಡೆ ಅವರು ಆತ್ಮಹತ್ಯೆಗೆ ಶರಣಾದ ಬಗ್ಗೆ ವಿವಿಧ ಮಾಧ್ಯಮಗಳು ವರದಿ ಮಾಡಿದೆ. ಶೌಚಾಲಯಕ್ಕೆ ಹೋಗಿದ್ದ ಅವರು ಅಲ್ಲಿಯೇ ಬ್ಲೇಡಿನಿಂದ ಕುತ್ತಿಗೆ ಕೊಯ್ದುಕೊಂಡಿದ್ದು, ಮಾನಸಿಕ ಅಸ್ವಸ್ಥರಾಗಿದ್ದ ಎಲ್ ಕೆ ಹೆಗಡೆ ಅವರು ಆತ್ಮಹತ್ಯೆಯ ನಿರ್ಧಾರ ಮಾಡಿದ ಬಗ್ಗೆ ಕುಟುಂಬ ಮೂಲಗಳು ಹೇಳಿವೆ. ಸದ್ಯ ಪೊಲೀಸರು ಈ ಬಗ್ಗೆ ತನಿಖೆ ಶುರು ಮಾಡಿದ್ದಾರೆ.
ADVERTISEMENT
ಶಿರಸಿಯ ಕಾನಗೋಡು ಮೂಲದ ಎಲ್ ಕೆ ಹೆಗಡೆ ಅವರು ಸದ್ಯ ಎಸಳೆಯಲ್ಲಿ ವಾಸವಾಗಿದ್ದರು. 56 ವರ್ಷದ ಅವರು ಅಡಿಕೆ ವ್ಯಾಪಾರಿಯಾಗಿದ್ದರು. ಅಲ್ಲಿಂದ ಬರುವ ಆದಾಯದಿಂದಲೇ ಅವರು ಕುಟುಂಬ ನಡೆಸುತ್ತಿದ್ದರು. ಆಗಾಗ ಅವರ ಮನೆಯಲ್ಲಿ ಜಗಳ ನಡೆಯುತ್ತಿದ್ದು, ಪತಿ-ಪತ್ನಿಯರ ಕಲಹ ವಿಕೋಪಕ್ಕೆ ತೆರಳಿತ್ತು. ಭಾನುವಾರವೂ ಅವರ ನಡುವೆ ಜಗಳ ನಡೆದಿದ್ದು, ಇದೇ ಆತ್ಮಹತ್ಯೆ ನಿರ್ಧಾರಕ್ಕೆ ಕಾರಣ ಎಂಬ ಮಾಹಿತಿಯಿದೆ. ಆದರೆ, ಕುಟುಂಬದ ಮೂಲಗಳು ಅದನ್ನು ಅಲ್ಲಗಳೆದಿವೆ.
ಉಚಿತ ಬಂಜೆತನ ತಪಾಸಣಾ ಶಿಬಿರ - ಜೂನ್ 23, 2026
ಸ್ಥಳ: ಹೈಟೆಕ್ ರಕ್ತ ತಪಾಸಣಾ ಕೇಂದ್ರ & ಪಾಲಿ ಕ್ಲಿನಿಕ್ ಅಂಕೋಲಾ | ನೋವಾ ಐವಿಎಫ್
ADVERTISEMENT
ಭಾನುವಾರ ಸಹ ದಂಪತಿ ನಡುವೆ ದೊಡ್ಡ ವಾಗ್ವಾದ ನಡೆದಿದ್ದು, ಇದರಿಂದ ಎಲ್ ಕೆ ಹೆಗಡೆ ಅವರು ಆಘಾತಕ್ಕೆ ಒಳಗಾದರು. ಮಾನಸಿಕವಾಗಿ ಅಸ್ವಸ್ಥರಾಗಿದ್ದ ಅವರು ಆತ್ಮಹತ್ಯೆಯ ನಿರ್ಧಾರ ಮಾಡಿದರು. ಎಲ್ ಕೆ ಹೆಗಡೆ ಅವರು ಪದೇ ಪದೇ ಆತ್ಮಹತ್ಯೆಯ ಬಗ್ಗೆ ಮಾತನಾಡುತ್ತಿದ್ದರು. ಅವರನ್ನು ಆ ವಿಷಯದಿಂದ ಹೊರತರುವ ಪ್ರಯತ್ನ ನಡೆದರೂ ಅದು ಫಲ ಕೊಟ್ಟಿಲ್ಲ ಎಂಬ ಬಗ್ಗೆಯೂ ಹೇಳಲಾಗಿದೆ. ಈ ದಿನ ಶೌಚಾಲಯಕ್ಕೆ ಹೋದ ಅವರು ಬ್ಲೇಡಿನಿಂದ ಕುತ್ತಿಗೆಯನ್ನು ಸೀಳಿಕೊಂಡಿದ್ದು, ಅಲ್ಲಿಯೇ ಪ್ರಾಣ ಬಿಟ್ಟರು. ಆತ್ಮಹತ್ಯೆ ಸುದ್ದಿ ಕೇಳಿ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಸದ್ಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.