ಮದುವೆಗೆ ಬಂದಿದ್ದ ಸಂಬ0ಧಿಕರ ನಡುವೆ ಭಟ್ಕಳದಲ್ಲಿ ಹೊಡೆದಾಟ ನಡೆದಿದೆ. ಈ ಹೊಡೆದಾಟದಲ್ಲಿ ಒಟ್ಟು ಐವರು ಗಾಯಗೊಂಡಿದ್ದಾರೆ.
ಭಟ್ಕಳ ತಾಲೂಕಿನ ಹೆಬಳೆ ಗ್ರಾಮಪಂಚಾಯಿತ್ ವ್ಯಾಪ್ತಿಯ ಹನೀಫಾಬಾದ್‌ನ ಮದುವೆ ಹಾಲ್ ಮುಂದೆ ಮೂರು ದಿನಗಳ ಹಿಂದೆ ಹೊಡೆದಾಟ ನಡೆದಿದೆ. ಹೊಡೆದಾಟದ ವಿಡಿಯೋ ವೈರಲ್ ಆಗಿದ್ದು, ಅದೇ ಆಧಾರದಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮಾಹಿತಿಗಳ ಪ್ರಕಾರ ಮದುವೆಗೆ ಬಂದಿದ್ದ ಯುವಕರ ನಡುವೆ ತಮ್ಮ ವಾಹನ ಪಾರ್ಕಿಂಗ್ ವಿಚಾರಕ್ಕಾಗಿ ಜಗಳ ಶುರುವಾಯಿತು. ಮಾತಿಗೆ ಮಾತು ಬೆಳೆದು ಜಗಳ ದೊಡ್ಡವಾಯಿತು. ಕೊನೆಗೆ ಅದು ಹೊಡೆದಾಟದ ಸ್ವರೂಪಪಡೆಯಿತು. ಅಲ್ಲಿದ್ದ ಕೆಲವರು ಇದನ್ನು ವಿಡಿಯೋ ಮಾಡಿದ್ದು, ಅದು ಇದೀಗ ವೈರಲ್ ಆಗಿದೆ.
ಹೊಡೆದಾಟದ ವೇಳೆ ಎರಡು ಗುಂಪಿನವರು ಪರಸ್ಪರ ಬೈದುಕೊಂಡಿದ್ದಾರೆ. ಕೆಟ್ಟದ್ದಾಗಿ ನಿಂದಿಸಿಕೊAಡಿದ್ದಾರೆ. ಹೊಡೆದಾಟದ ಸುದ್ದಿ ಕೇಳಿ ಪೊಲೀಸರು ಸ್ಥಳಕ್ಕೆ ಧಾವಿಸಿ ಸಮಾಧಾನ ಮಾಡಿದರೂ ಪ್ರಯೋಜನವಾಗಿಲ್ಲ. ಭಟ್ಕಳ ಗ್ರಾಮೀಣ ಠಾಣೆಯ ಇನ್ಸ್ಪೆಕ್ಟರ್ ಮಂಜುನಾಥ ಲಿಂಗಾರೆಡ್ಡಿ ತಮ್ಮ ಸಿಬ್ಬಂದಿ ಜೊತೆ ತೆರಳಿ ಹೊಡೆದಾಟ ನಿಲ್ಲಿಸುವ ಕೆಲಸ ಮಾಡಿದರಾದರೂ ಅಲ್ಲಿದ್ದವರು ಶಾಂತಿ ಕಾಪಾಡಲಿಲ್ಲ. ಸ್ಥಳದಲ್ಲಿ ಗಂಭೀರ ಸ್ವರೂಪದ ವಾತಾವರಣ ನಿರ್ಮಾಣವಾಗಿ ಸಾರ್ವಜನಿಕ ಶಾಂತಿ ಭಂಗವಾಗುವ ಸಾಧ್ಯತೆ ಹಿನ್ನಲೆ ಪೊಲೀಸರು ಕಾನೂನು ಕ್ರಮ ಜರುಗಿಸಿದರು.
ಹನೀಫಾಬಾದ್‌ನ ಉಜೇಫ್ ಸೈದ ಅಬ್ದುಲ್ ಖಾದರ, ಸೈಯ್ಯದ ಉಮೇರ ಸೈಯ್ಯದ ಅಬ್ದುಲ್ ಖಾದಿರ, ಉಮೇರ ರುಕ್ಕುದ್ದೀನ್ ಉಬೇದುಲ್ಲಾ, ಮುಗೇರ್ ಎಂ ಜೆ ಮಂಜೂರ ಎಂ ಎನ್, ಆಜಾದನಗರ 6ನೇ ಕ್ರಾಸ್‌ನ ಇಬಾದುಲ್ಲಾ ಸಾದೀಕಟಾನ, ದೇವಿನಗರ ಜಾಲಿಯ ಅಬ್ದುಲ್ ರಹೀಮ ಮಹಮ್ಮದ್ ಹುಸೇನ್, ಮೂಸಾನಗರದ ಮುಸ್ತಾಕ್ ಮಕ್ಖುಲ್ ಹಾಗೂ ದೇವಿನಗರದ ತಾಹೀರ ಮಹಮ್ಮದ್ ಹುಸೇನ್ ಹೊಡೆದಾಟದಲ್ಲಿ ಭಾಗಿಯಾಗಿರುವುದು ಗೊತ್ತಾಗಿದೆ. ಅವರ ವಿರುದ್ಧ ಭsÀಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.