ಮುಂಡಗೋಡಿನ ನಂದಿಗಟ್ಟಾದಲ್ಲಿ ಯುವತಿಯೊಬ್ಬರು ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅವರ ಸಾವಿನಲ್ಲಿ ಸಂಶಯ ಶುರುವಾಗಿದೆ.
ಮುಂಡಗೋಡಿನ ನಂದಿಗಟ್ಟಾದಲ್ಲಿ ಲಕ್ಷ್ಮಿ ಸಿಂಗೇರಿ ಅವರು ವಾಸವಾಗಿದ್ದರು. 17 ವರ್ಷದ ಅವರು ಕಾಲೇಜಿಗೆ ಹೋಗುತ್ತಿರಲಿಲ್ಲ. ಮನೆಯಲ್ಲಿಯೇ ಇದ್ದು ಅವರು ಮನೆಯ ಎಲ್ಲಾ ಕೆಲಸಗಳನ್ನು ನೋಡಿಕೊಳ್ಳುತ್ತಿದ್ದರು. ಮೇ 1ರಂದು ಅವರು ದಿಢೀರ್ ಆಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಲಕ್ಷಿö್ಮÃ ಸಿಂಗೇರಿ ಅವರು ಯಾಕೆ ಹೀಗೆ ಮಾಡಿಕೊಂಡರು? ಎನ್ನುವುದು ಯಾರಿಗೂ ಗೊತ್ತಾಗಲಿಲ್ಲ.
ಬೆಳಗ್ಗೆ 8.30ಕ್ಕೆ ಲಕ್ಷ್ಮಿ ಸಿಂಗೇರಿ ಅವರ ತಂದೆ ಸಣ್ಣಪ್ಪ ಮಾರೆಪ್ಪ ಸಿಂಗೇರಿ ಅವರು ಮನೆಯಿಂದ ಹೊರ ಹೋಗಿದ್ದರು. 9.30ಕ್ಕೆ ಮರಳಿ ಮನೆಗೆ ಬಂದಾಗ ಲಕ್ಷ್ಮಿ ಸಿಂಗೇರಿ ಅವರು ಶವವಾಗಿದ್ದರು. ಮನೆಯ ಅಟ್ಟಕ್ಕೆ ಅಡ್ಡಲಾಗಿ ಕಟ್ಟಿದ ಕಟ್ಟಿಗೆಗೆ ಮಗಳು ಅವರು ನೇತಾಡುತ್ತಿರುವುದನ್ನು ನೋಡಿ ಸಣ್ಣಪ್ಪ ಸಿಂಗೇರಿ ಅವರು ಆಘಾತಕ್ಕೆ ಒಳಗಾದರು. ಈ ಸಾವಿನಲ್ಲಿ ಸಂಶಯವಿರುವ ಬಗ್ಗೆ ಅವರು ಪೊಲೀಸರಿಗೆ ತಿಳಿಸಿದರು. ಮುಂಡಗೋಡು ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ಶುರು ಮಾಡಿದ್ದಾರೆ.
`ಆತ್ಮಹತ್ಯೆ ಅಪರಾಧ’