ಕಳೆದ ಒಂದು ದಶಕದಿಂದ ಅಂಕೋಲಾದ ಅವರ್ಸಾ ಹಾಗೂ ಸುತ್ತಲಿನ ಭಾಗದಲ್ಲಿ ಓಡಾಡಿಕೊಂಡಿದ್ದ ಪ್ರೇಮಾ ಅವರ ಕಾಲಿನ ಮೇಲೆ ಸೋಮವಾರ ಟ್ಯಾಂಕರ್ ಹತ್ತಿದೆ. ಪರಿಣಾಮ ಅವರ ಎರಡು ಕಾಲು ತುಂಡಾಗಿದೆ.
ADVERTISEMENT
ಪ್ರೇಮಾ ಅವರು ಮಾನಸಿಕ ಅಸ್ವಸ್ಥರಾಗಿದ್ದು, ಅನೇಕ ವರ್ಷಗಳಿಂದ ಅವರ್ಸಾದಲ್ಲಿ ಓಡಾಡಿಕೊಂಡಿದ್ದರು. ಸೋಮವಾರ ಮಧ್ಯಾಹ್ನ ಅವರು ಹೆದ್ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಕೆನರಾ ಬ್ಯಾಂಕಿನ ಎದುರಿನ ಪಾದಚಾರಿಗಳು ರಸ್ತೆ ದಾಡುವ ಜಾಗದಲ್ಲಿ ಟ್ಯಾಂಕರ್ ಅವರಿಗೆ ಗುದ್ದಿತು.
ಉಚಿತ ಬಂಜೆತನ ತಪಾಸಣಾ ಶಿಬಿರ - ಜೂನ್ 23, 2026
ಸ್ಥಳ: ಹೈಟೆಕ್ ರಕ್ತ ತಪಾಸಣಾ ಕೇಂದ್ರ & ಪಾಲಿ ಕ್ಲಿನಿಕ್ ಅಂಕೋಲಾ | ನೋವಾ ಐವಿಎಫ್
ADVERTISEMENT
ಪರಿಣಾಮ ಪ್ರೇಮಾ ಅವರು ನೆಲಕ್ಕೆ ಬಿದ್ದರು. ಅದಾಗಿಯೂ, ಅವರ ಕಾಲುಗಳ ಮೇಲೆ ಟ್ಯಾಂಕರ್ ಚಕ್ರ ಹತ್ತಿತು. ಅಲ್ಲಿದ್ದ ಆಂಬುಲೆನ್ಸ ಮೂಲಕ ಪ್ರೇಮಾ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ತಾಲೂಕಾ ಆಸ್ಪತ್ರೆಯಿಂದ ಅವರನ್ನು ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದ್ದು, ಶಿವಾ ನಾಯ್ಕ, ನಾಗರಾಜ ಐಗಳ ಇನ್ನಿತರರು ಪ್ರೇಮಾ ಅವರನ್ನು ಆಸ್ಪತ್ರೆಗೆ ಸಾಗಿಸಲು ಸಹಕರಿಸಿದರು. ಅವೈಜ್ಞಾನಿಕ ಕಾಮಗಾರಿ ಪರಿಣಾಮ ಪದೇ ಪದೇ ಇಲ್ಲಿ ಅಪಘಾತ ನಡೆಯುತ್ತಿದೆ ಎಂದು ಜನ ದೂರಿದರು.