ಯಲ್ಲಾಪುರದ ಇಡಗುಂದಿ ಬಳಿ ಎರಡು ಕಾರುಗಳ ನಡುವೆ ಅಪಘಾತ ನಡೆದಿದೆ. ಈ ಅಪಘಾತದಲ್ಲಿ ಮೂವರಿಗೆ ಪೆಟ್ಟಾಗಿದ್ದು, ಕಾರಿನಲ್ಲಿದ್ದ ಮಹಿಳೆಯೊಬ್ಬರ ಎರಡು ಹಲ್ಲು ಮುರಿದಿದೆ.
ಯಲ್ಲಾಪುರದ ಇಡಗುಂದಿಯಲ್ಲಿ ಪುರೋಹಿತರಾಗಿರುವ ಮಹೇಶ ಹರಿ ಭಟ್ಟ ಅವರು ಶಾಂತಿಕಾ ಗಂಗಾಧರ ಗಾಂವ್ಕರ ಅವರ ಜೊತೆ ಸೋಮವಾರ ಸಂಜೆ ಕಾರಿನಲ್ಲಿ ಸಂಚರಿಸುತ್ತಿದ್ದರು. ಯಲ್ಲಾಪುರದಿಂದ ಇಡಗುಂದಿಯ ಕಡೆ ಮಹೇಶ ಭಟ್ಟ ಅವರ ಕಾರು ವೇಗವಾಗಿ ಹೊರಟಿತ್ತು. ಅದೇ ಸಮಯದಲ್ಲಿ ಧಾರವಾಡದ ವಿಶ್ವನಾಥ ಶೆಟ್ಟಿ ಅವರು ಇನ್ನಷ್ಟು ವೇಗವಾಗಿ ಕಾರು ಓಡಿಸಿಕೊಂಡು ಬಂದಿದ್ದರು.
ಅಂಕೋಲಾದಿAದ ಯಲ್ಲಾಪುರ ಕಡೆ ವೇಗವಾಗಿ ಬಂದ ವಿಶ್ವನಾಥ ಶೆಟ್ಟಿ ಅವರ ಕಾರು ಮಹೇಶ ಭಟ್ಟ ಅವರ ಕಾರಿಗೆ ಡಿಕ್ಕಿಯಾಯಿತು. ಬಳಗಾರ್ ಕ್ರಾಸಿನ ಬಳಿ ನಡೆದ ಈ ಅಪಘಾತದಲ್ಲಿ ಮಹೇಶ ಭಟ್ಟ ಅವರ ಕಾಲಿಗೆ ಪೆಟ್ಟಾಯಿತು. ಶಾಂತಿಕಾ ಗಾಂವ್ಕರ್ ಅವರಿಗೂ ಗಾಯವಾಗಿದ್ದು, ತಲೆ ಹಿಂಬಾಗಕ್ಕೆ ನೋವಾಯಿತು. ಜೊತೆಗೆ ಶಾಂತಿಕಾ ಗಾಂವ್ಕರ್ ಅವರ ಬಾಯೊಳಗಿದ್ದ ಎರಡು ಹಲ್ಲುಗಳು ಮುರಿದು ಬಿದ್ದವು. ವಿಶ್ವನಾಥ ಶೆಟ್ಟಿ ಅವರು ಸಹ ಅಪಘಾತದಲ್ಲಿ ಗಾಯಗೊಂಡರು.
ಈ ಅಪಘಾತದಲ್ಲಿ ಎರಡೂ ವಾಹನಗಳು ಜಖಂಗೊoಡಿತು. ಗಾಯಗೊಂಡ ಮೂವರಿಗೂ ಯಲ್ಲಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಯಿತು. ಕಾರು ಚಾಲಕ ವಿಶ್ವನಾಥ ಅಮರ ಶೆಟ್ಟಿ ಅವರ ವಿರುದ್ಧ ಮಹೇಶ ಭಟ್ಟ ಅವರು ಪೊಲೀಸ್ ದೂರು ನೀಡಿದರು.