ಅಡಿಕೆ ವ್ಯಾಪಾರದ ದುಡ್ಡನ್ನು ಅಂದರ್ ಬಾಹರ್ ಆಟಕ್ಕೆ ವಿನಿಯೋಗಿಸಿದ್ದ ಶಿರಸಿಯ ನಾಲ್ವರು ಅಡಿಕೆ ವ್ಯಾಪಾರಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಘಟಾನುಘಟಿ ಅಡಿಕೆ ವ್ಯಾಪಾರಿಗಳು ಜೂಜಾಟಕ್ಕೆ ಬಳಸಿದ್ದ 13 ಸಾವಿರ ರೂ ಹಣವನ್ನು ಪೊಲೀಸರು ಜಪ್ತು ಮಾಡಿದ್ದಾರೆ.
Advertisement. Scroll to continue reading.
ಶಿರಸಿ ಹುಲೆಕಲ್ಲಿನ ಅಡಿಕೆ ವ್ಯಾಪಾರಿ ದಾವುದ್‌ಖಾನ್ ಅಮೀದಖಾನ್ ಅವರು ತಮ್ಮ ಸಹಚರ ಅಡಿಕೆ ವ್ಯಾಪಾರಿಗಳನ್ನು ಜೂಜಾಟಕ್ಕೆ ಆಮಂತ್ರಿಸಿದ್ದರು. ಅದರ ಪ್ರಕಾರ ಹುಲೆಕಲ್’ನ ಮುಕ್ತಮಖಾನ್ ಹಮೀದಖಾನ್, ಹುಸೇನಸಾಬ್ ಹಮೀದಖಾನ್, ಜಾಕೀರ ಅಬ್ಬಾಸಮುಲ್ಲಾ ಅವರು ಈ ಆಮಂತ್ರಣ ಒಪ್ಪಿ ಇಸ್ಪಿಟ್ ಆಡಲು ಆಗಮಿಸಿದ್ದರು.
ಅಕ್ಟೊಬರ್ 26ರಂದು ಶಿರಸಿಯ ಅಗಸಾಲ ಬಳಿಯ ದೇವರಹೊಳೆ ಬಳಿ ಅವರೆಲ್ಲರೂ ಸೇರಿದ್ದರು. ಸಂಜೆ 6.45ಕ್ಕೆ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್‌ಐ ಸಂತೋಷಕುಮಾರ ಎಂ ಅವರು ಈ ವಿಷಯ ಅರಿತು ಅಲ್ಲಿಗೆ ಹೋದರು. 52 ಇಸ್ಪಿಟ್ ಎಲೆ, 13100ರೂ ಹಣ, ಚಾರ್ಜಿಂಗ್ ಬ್ಯಾಟರಿ ಜೊತೆ ಅಲ್ಲಿದ್ದ ಚೀಲವನ್ನು ಪೊಲೀಸರು ವಶಕ್ಕೆಪಡೆದರು. ಆ ನಾಲ್ವರ ವಿರುದ್ಧವೂ ಪೊಲೀಸ್ ಪ್ರಕರಣ ದಾಖಲಿಸಿ, ನ್ಯಾಯಾಲಯಕ್ಕೆ ವರದಿ ಸಲ್ಲಿಸಿದರು.
`ಜೂಜಾಟದಿಂದ ಜೀವನ ಹಾಳು’