ಮುಂಡಗೋಡು ಬಂಕಾಪುರ ರಸ್ತೆಯ ಸನವಳ್ಳಿ ಗ್ರಾಮದ ರಾಮಕೃಷ್ಣ ಹೆಗಡೆ ಅವರ ಜಮೀನಿನ ಬಳಿ ಕಾರೊಂದು ಎದುರಿಗಿದ್ದ ಬೈಕಿಗೆ ಡಿಕ್ಕಿಯಾಗಿದೆ. ಪರಿಣಾಮ ಬೈಕ್ ಸವಾರ ಸಾವನಪ್ಪಿದ್ದಾರೆ.
ಅಕ್ಟೊಬರ್ 14ರ ಮದ್ಯಾಹ್ನ ಯಲ್ಲಾಪುರದ ಮೇಲಿನಭರಣಿಯ ಚಂದ್ರಶೇಖರ ನಾಯ್ಕ ಅವರು ಮುಂಡಗೋಡಿದAದ ಬಂಕಾಪುರ ಕಡೆ ಕಾರು ಓಡಿಸುತ್ತಿದ್ದರು. ಅದೇ ಮಾರ್ಗವಾಗಿ ಮುಂಡಗೋಡು ನಂದಿಪುರದ ಮೀನು ವ್ಯಾಪಾರಿ ಮಲ್ಲೇಶಿ ತಳವಾರ (45) ಅವರು ಬೈಕಿನಲ್ಲಿ ಹೋಗುತ್ತಿದ್ದರು. ಜೋರಾಗಿ ಬಂದ ಕಾರು ಹಿಂದಿನಿoದ ಬೈಕಿಗೆ ಡಿಕ್ಕಿ ಹೊಡೆಯಿತು.
ಪರಿಣಾಮ ಮಲ್ಲೇಶಿ ತಳವಾರ ಅವರು ನೆಲಕ್ಕೆ ಬಿದ್ದು ಪೆಟ್ಟು ಮಾಡಿಕೊಂಡರು. ಗಾಯಗೊಂಡ ಅವರನ್ನು ಮುಂಡಗೋಡಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್’ಗೆ ಸೇರಿಸಲಾಯಿತು. ಆದರೆ, ಮಲ್ಲೇಶಿ ತಳವಾರ್ ಅವರು ಬದುಕಲಿಲ್ಲ. ಅಪಘಾತದಿಂದ ಆದ ಸಾವಿನ ಬಗ್ಗೆ ನಂದಿಪುರದ ಸುನೀಲ ಕಟ್ಟಿಮನಿ ಅವರು ಪೊಲೀಸರಿಗೆ ಮಾಹಿತಿ ನೀಡಿದರು. ಮುಂಡಗೋಡು ಪೊಲೀಸರು ಚಂದ್ರಶೇಖರ ನಾಯ್ಕ ಅವರ ವಿರುದ್ಧ ಪ್ರಕರಣ ದಾಖಲಿಸಿದರು.