ಸರ್ಕಾರಿ ಕಚೇರಿಯಲ್ಲಿ ಕೆಲಸ ಮಾಡುವ ಅಧಿಕಾರಿಗಳು ಕಿರಿಯ ನೌಕರರಿಗೆ ಕಿರುಕುಳ ನೀಡಿದರೆ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರಕ್ಕೆ ಮಾಹಿತಿ ಕೊಡುವಂತೆ ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡ್ರಿಗಸ್ ಮನವಿ ಮಾಡಿದ್ದಾರೆ.
`ಅನೇಕ ಬಾರಿ ಮೇಲಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ದಾಖಲೆ ತಿದ್ದುಪಡಿ, ನ್ಯಾಯದ ವಿರುದ್ಧ ಕೆಲಸ ಮಾಡುವಂತೆ ಒತ್ತಡ ತರುತ್ತಾರೆ. ಅಂಥ ಸನ್ನಿವೇಶದಲ್ಲಿ ಸಣ್ಣ ನೌಕರರಿಯಲ್ಲಿರುವವರು ಕಿರುಕುಳ ಅನುಭವಿಸುತ್ತಾರೆ. ಸರ್ಕಾರಕ್ಕೆ ಮೋಸ ಮಾಡುವಂತೆ ಒತ್ತಡ ಬಂದಾಗ ಅದನ್ನು ಸಹಿಸದೇ ಜೀವಹಾನಿ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಿದ್ದು, ಅಂಥಹ ಕೆಲಸಗಳಿಗೆ ಮುಂದಾಗಬೇಡಿ’ ಎಂದು ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದವರು ಮನವಿ ಮಾಡಿದ್ದಾರೆ.
`ಈಚೆಗೆ ರಾಜ್ಯದ ಎಲ್ಲಡೆ ಭ್ರಷ್ಟ ಅಧಿಕಾರಿ ಹಾಗೂ ರಾಜಕಾರಣಿಗಳು ಅಧಿಕಾರ ದುರುಪಯೋಗಪಡಿಸಿಕೊಳ್ಳುತ್ತಿದ್ದು, ಜನರಿಗೆ ಅನ್ಯಾಯ ಮಾಡುತ್ತಿದ್ದಾರೆ. ಪರಿಣಾಮ ಕೆಳಹಂತದ ಹೊರಗುತ್ತಿಗೆ ನೌಕರರು ಸಮಸ್ಯೆ ಅನುಭವಿಸುತ್ತಿದ್ದಾರೆ. ಅಂಥ ನೌಕರರು ಹೆದರದೇ 7892221590ಗೆ ಫೋನ್ ಮಾಡಬಹುದು’ ಎಂದು ಸಾಮಾಜಿಕ ಕಾರ್ಯಕರ್ತ ಸುಧಾಕರ ನಾಯ್ಕ ಅವರು ಹೇಳಿದ್ದಾರೆ.