ಕಾಣೆಯಾದ ಪತ್ನಿ ಸಿಗದ ಕೊರಗಿನಲ್ಲಿ ಶಿರಸಿಯ ಹನಮಂತಪ್ಪ ಬೋವಿವಡ್ಡರ್ ಅವರು ಬಾವಿಗೆ ಹಾರಿದ್ದಾರೆ. ನೀರಿನಲ್ಲಿ ಉಸಿರುಗಟ್ಟಿ ಅವರುಬಾವಿಯೊಳಗೆ ಶವವಾಗಿದ್ದಾರೆ.
ಸೊರಬಾದ ಬಲರಾಮ ಹನಮಂತಪ್ಪ ಬೋವಿವಡ್ಡರ್ (47) ಅವರು ಶಿರಸಿಯ ಬೈರುಂಬೆ ಬಳಿ ವಾಸವಾಗಿದ್ದರು. ಬೆಳಲೆಯ ಬಳಿ ಅವರು ಕುಟುಂಬಸಹಿತ ಕೂಲಿ ಕೆಲಸ ಮಾಡುತ್ತಿದ್ದರು. ಅವರ ಪತ್ನಿ ಮಂಜುಳಾ ಅವರು ಕಾಣೆಯಾಗಿದ್ದು, ಎಲ್ಲಿ ಹುಡುಕಿದರೂ ಸಿಕ್ಕಿರಲಿಲ್ಲ. ಈಚೆಗೆ ಬಲರಾಮ ಬೋವಿವಡ್ಡರ್ ಅವರು ಅನಾರೋಗ್ಯ ಸಹ ಒಳಗಾಗಿದ್ದರು.
Advertisement. Scroll to continue reading.
Advertisement. Scroll to continue reading.
Advertisement. Scroll to continue reading.
ಅನಾರೋಗ್ಯದ ಅವಧಿಯಲ್ಲಿಯೂ ಪತ್ನಿ ಜೊತೆಗಿರದ ಕಾರಣ ಅವರು ಸಾಕಷ್ಟು ನೊಂದಿದ್ದರು. ಹೀಗಿರುವಾಗ ಅಕ್ಟೊಬರ್ 24ರಂದು ಹನಮಂತಪ್ಪ ಬೋವಿವಡ್ಡರ್ ಅವರು ಬೆಳಲೆಯ ಅಲ್ಪಿಡ್ ರೋಡಿಗ್ರಸ್ ಅವರ ಹಂದಿ ಸಾಕಾಣಿಕಾ ಕೇಂದ್ರದ ಬಳಿ ಹೋಗಿದ್ದರು. ಮಾನಸಿಕ ನೋವಿನಲ್ಲಿದ್ದ ಅವರು ಅಲ್ಲಿರುವ ನೆಲಬಾವಿಯಲ್ಲಿ ಅವರು ಹಾರಿ ಪ್ರಾಣ ಬಿಟ್ಟರು.
ಅದೇ ಹಂದಿ ಸಾಕಾಣಿಕಾ ಕೇಂದ್ರದಲ್ಲಿ ಕೆಲಸ ಮಾಡುವ ಹನಮಂತಪ್ಪ ಬೋವಿವಡ್ಡರ್ ಅವರ ಮಗ ಗಣೇಶ ಬೋವಿವಡ್ಡರ್ ತಂದೆಯ ಸಾವಿನ ಬಗ್ಗೆ ಪೊಲೀಸರಿಗೆ ಹೇಳಿದರು. ಶಿರಸಿ ಗ್ರಾಮೀಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದರು.