ಶರಾವತಿ ಪಂಪ್ ಸ್ಟೋರೆಜ್ ವಿಷಯವಾಗಿ ಉಗ್ರ ಹೋರಾಟಕ್ಕೆ ಕರೆ ನೀಡಿರುವ ಹೊನ್ನಾವರ ಬಂಗಾರಮಕ್ಕಿಯ ಮಾರುತಿ ಗುರೂಜಿ ಅವರು ನೆರೆಜಿಲ್ಲೆ ಸಾಗರ ಪ್ರವಾಸ ಮಾಡಿದ್ದಾರೆ. ಅಲ್ಲಿ 12 ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ.
ಶರಾವತಿ ಪಂಪ್ ಸ್ಟೋರೇಜ್ ಯೋಜನೆ ವಿರೋಧಿಸಿ ರೈತ ಸಂಘದವರು ಪ್ರತಿಭಟನೆ ಮಾಡುತ್ತಿದ್ದು, ಅದಕ್ಕೆ ಮಾರುತಿ ಗುರೂಜಿ ಬೆಂಬಲ ನೀಡಿದ್ದಾರೆ. `ಪರಿಸರಕ್ಕೆ ಮಾರಕವಾದ ಈ ಯೋಜನೆ ಯಾವುದೇ ಕಾರಣಕ್ಕೂ ಅನುಷ್ಠಾನಕ್ಕೆ ಬಿಡಲ್ಲ’ ಎಂದು ಮಾರುತಿ ಗುರೂಜಿ ಗದರಿದ್ದಾರೆ. ಈ ವೇಳೆ ಪ್ರತಿಭಟನಾಕಾರರು ಅಣಕು ಶವಯಾತ್ರೆ ನಡೆಸಿದ್ದು, ಅದರಲ್ಲಿಯೂ ಮಾರುತಿ ಗುರೂಜಿ ಭಾಗವವಹಿಸಿದ್ದಾರೆ. ಆ ಮೂಲಕ ಸರ್ಕಾರದ ವಿರುದ್ಧ ತಮ್ಮ ಆಕ್ರೋಶವ್ಯಕ್ತಪಡಿಸಿದ್ದಾರೆ.
ಅಪರೂಪದ ವನ್ಯ ಸಂಪತ್ತುಹೊoದಿರುವ ಹೊನ್ನಾವರ ಭಾಗದಲ್ಲಿ ೧೬ ಸಾವಿರ ಮರಗಳನ್ನು ಕಡಿದು ಶರಾವತಿ ಪಂಪ್ ಸ್ಟೋರೇಜ್ ಯೋಜನೆ ನಿರ್ಮಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಇದರಿಂದ ಆ ಭಾಗದ ಶಿಂಗಳಿಕ ಸೇರಿ ಹಲವು ಬಗೆಯ ವನ್ಯಜೀವಿಗಳ ಸಂತತಿ ನಾಶವಾಗುವ ಆತಂಕ ಎದುರಾಗಿದೆ. ಈ ಹಿನ್ನಲೆ ಎಲ್ಲಡೆ ಈ ಯೋಜನೆಗೆ ಭಾರೀ ಪ್ರಮಾಣದಲ್ಲಿ ವಿರೋಧವ್ಯಕ್ತವಾಗುತ್ತಿದೆ. ಹೊನ್ನಾವರದ ಮಾರುತಿ ಗುರೂಜಿ ಸಹ ಯೋಜನೆಯನ್ನು ಖಡಾಖಂಡಿತವಾಗಿ ತಿರಸ್ಕರಿಸಿದ್ದಾರೆ.
ಆನಂದಪುರದ ಮುರುಗಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಸಹ ಈ ಯೋಜನೆಗೆ ವಿರೋಧವ್ಯಕ್ತಪಡಿಸಿದ್ದಾರೆ. ಅವರು ಸಹ ಸಾಗರದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಪ್ರತಿಭಟನಾಕಾರರ ಜೊತೆ ಹೆಜ್ಜೆ ಹಾಕಿದ್ದಾರೆ. `ಅವೈಜ್ಞಾನಿಕ ಯೋಜನೆಯನ್ನು ಸರ್ಕಾರ ಕೈ ಬಿಡಬೇಕು’ ಎಂದು ಆಗ್ರಹಿಸಿದರು. ಸರ್ಕಾರದ ಅಣಕು ಶವಯಾತ್ರೆ ಮುಗಿದ ನಂತರ ಅಲ್ಲಿನ ಜನ ಶವವನ್ನು ಸುಟ್ಟು ಆಕ್ರೋಶವ್ಯಕ್ತಪಡಿಸಿದರು.