ದುಡಿಯುವ ಕೈಗಳಿಗೆ ಕೆಲಸ ನೀಡುವುದಕ್ಕಾಗಿ ಕೇಂದ್ರ ಸರ್ಕಾರ ವಿವಿಧ ತರಬೇತಿ ನೀಡುತ್ತಿದ್ದು, ವಿಶ್ವಕರ್ಮ ಯೋಜನೆ ಅಡಿ ತರಬೇತಿಪಡೆದ ಮಹಿಳೆಯೊಬ್ಬರಿಗೆ ಸರ್ಕಾರದಿಂದ ಕೋಳಿ ಹಿಕ್ಕಿ ತುಂಬಿದ ಬ್ಯಾಗಿನ ಉಡುಗರೆ ಸಿಕ್ಕಿದೆ!
ADVERTISEMENT
ಅಂಕೋಲಾದ ಪೂಜಗೇರಿಯ ಅಶ್ವಿನಿ ಗಾಂವ್ಕರ್ ಅವರು ಆನ್‌ಲೈನ್ ಮೂಲಕ ವಿಶ್ವಕರ್ಮ ಯೋಜನೆಯ ತರಬೇತಿಗಾಗಿ ಅರ್ಜಿ ಹಾಕಿದ್ದರು. ಕಾರವಾರದಲ್ಲಿ ನಡೆದ ತರಬೇತಿಯಲ್ಲಿಯೂ ಅವರು ಭಾಗವಹಿಸಿದ್ದರು. ಆರು ದಿನಗಳ ಕಾಲ ತರಬೇತಿಪಡೆದ ಅವರು ಅಲಂಕಾರಿಕ ವಸ್ತು ಸಿದ್ದಪಡಿಸುವ ಬಗ್ಗೆ ಕೌಶಲ್ಯ ಅಳವಡಿಸಿಕೊಂಡರು. ಅದಾದ ನಂತರ ಅವರಿಗೆ ಸರ್ಕಾರದಿಂದಲೇ ವಿಶೇಷ ಕಿಟ್ ಒದಗಿಸುವ ಭರವಸೆ ಸಿಕ್ಕಿತು.
ADVERTISEMENT
ತರಬೇತಿ ಮುಗಿಸಿ ಮನೆಗೆ ಬಂದ ತರುವಾಯ ಅಶ್ವಿನಿ ಗಾಂವ್ಕರ್ ಅವರಿಗೆ ಅಂಚೆ ಕಚೇರಿಯಿಂದ ಫೋನ್ ಬಂದಿತು. `ತಮ್ಮ ಹೆಸರಿಗೆ ಪಾರ್ಸಲ್ ಬಂದಿದೆ’ ಎಂದು ಅಂಚೆ ಇಲಾಖೆಯವರು ತಿಳಿಸಿದರು. ಅದರಂತೆ ರಿಕ್ಷಾ ಮಾಡಿಕೊಂಡು ಅವರು ಅಂಚೆ ಕಚೇರಿಗೆ ಹೋದರು. ಅಲ್ಲಿದ್ದ ಪಾರ್ಸಲ್’ನ್ನು ಬಿಡಿಸಿಕೊಂಡರು. ಹರಿದ ಬ್ಯಾಗು ತೆರೆದು ನೋಡಿದಾಗ ಅದರಲ್ಲಿ ಬರಪೂರ ಕೋಳಿ ಹಿಕ್ಕಿಗಳಿದ್ದವು. ಅದರ ಜೊತೆಯಿದ್ದ ಬಣ್ಣದ ಕಾಗದ, ಸೂಚಿ, ಕತ್ತರಿ, ಮಣಿ ಹಾಗೂ ರಿಬ್ಬನ್ ಸಹ ತುಂಡು ತುಂಡಾಗಿದ್ದವು!
ADVERTISEMENT
ಸರ್ಕಾರದಿAದ ಬಂದ ಪುಕ್ಕಟ್ಟೆ ಬ್ಯಾಗ್ ತರಲು ಪೂಜಗೇರಿಯಿಂದ ಅಂಚೆ ಕಚೇರಿಯವರೆಗೆ ರಿಕ್ಷಾ ಮಾಡಿ ಹೋಗಿದ್ದು ಅದರಲ್ಲಿದ್ದ ವಸ್ತುಗಳಿಗಿಂತಲೂ ದುಬಾರಿಯಾಗಿದ್ದವು. ಹೀಗಾಗಿ ಪೆಚ್ಚು ಮೋರೆಯೊಂದಿಗೆ ಅಶ್ವಿನಿ ಗಾಂವ್ಕರ್ ಅವರು ಗ್ರಾಮ ಪಂಚಾಯತ ಕಚೇರಿಗೆ ಬಂದು ಆದ ಅವಾಂತರಗಳನ್ನು ವಿವರಿಸಿದರು. ಗ್ರಾಮ ಪಂಚಾಯತದವರೇ ಅಶ್ವಿನಿ ಅವರನ್ನು ಈ ಯೋಜನೆಗೆ ಶಿಫಾರಸ್ಸು ಮಾಡಿದ್ದು, ಅಲ್ಲಿನವರು ಸಹ ಕೋಳಿ ಹಿಕ್ಕಿ ನೋಡಿ ಬೇಸರವ್ಯಕ್ತಪಡಿಸಿದರು.
ಸರ್ಕಾರದಿಂದ ಕೋಳಿ ಹಿಕ್ಕಿ ಸ್ವೀಕರಿಸಿದ ಅಶ್ವಿನಿ ಗಾಂವ್ಕರ್ ಹೇಳಿದ್ದೇನು? ಇಲ್ಲಿ ನೋಡಿ..