ಶಿರಸಿ-ಮುಂಡಗೋಡು ರಸ್ತೆಯಲ್ಲಿ ಶಿರಸಿಯ ನಯನಕುಮಾರ ಅವರು ಜೋರಾಗಿ ಬೈಕ್ ಓಡಿಸಿದ್ದು, ಆ ಬೈಕಿನ ಹಿಂದೆ ಕೂತಿದ್ದ ಮುಂಡಗೋಡಿನ ಪದ್ಮಾ ತಳವಾರ ಅವರು ನೆಲಕ್ಕೆ ಬಿದ್ದು ಸಾವಪ್ಪಿದ್ದಾರೆ.
ಅಕ್ಟೊಬರ್ 21ರ ಸಂಜೆ ಶಿರಸಿಯ ನಯನಕುಮಾರ ಮಾರುತಿ ಬಂಗೇರ ಅವರು ಮುಂಡಗೋಡಿನ ಕಡೆ ಹೊರಟಿದ್ದರು. ಅವರ ಬೈಕಿನಲ್ಲಿ ಮುಂಡಗೋಡು ಮಳಗಿಯ ಪದ್ಮಾ ವೆಂಕಟೇಶ ತಳವಾರ (52) ಅವರು ಕೂತಿದ್ದರು. ರಾಮಾಪುರದಿಂದ ಮಳಗಿ ಕಡೆ ಆ ಬೈಕು ಚಲಿಸುತ್ತಿದ್ದು, ಗೊಡಗೋಡಿಕೊಪ್ಪದ ಮುಕ್ತಿಮಠದ ಹತ್ತಿರ ಬೈಕಿನ ವೇಗ ಹೆಚ್ಚಿತು.
ಪರಿಣಾಮ ಪದ್ಮಾ ತಳವಾರ ಅವರು ಆಯತಪ್ಪಿ ಬೈಕಿನಿಂದ ಕೆಳಗೆ ಬಿದ್ದರು. ಅವರ ತಲೆ ಹಿಂಬಾಗ ಭಾರೀ ಪ್ರಮಾಣದಲ್ಲಿ ನೋವಾಯಿತು. ಅಲ್ಲಿಯೇ ಅವರು ತಮ್ಮ ಪ್ರಾಣಬಿಟ್ಟರು. ಮಳಗಿಯ ರವಿ ಅಟ್ಟಣಗಿ ಅವರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಮುಂಡಗೋಡು ಪೊಲೀಸರು ವೇಗವಾಗಿ ಬೈಕ್ ಓಡಿಸಿದ ನಯನಕುಮಾರ ಮಾರುತಿ ಬಂಗೇರ ಅವರ ವಿರುದ್ಧ ಪ್ರಕರಣ ದಾಖಲಿಸಿದರು.