`ಬೇರೆಯವರಿಗೆ ಎಂದಿಗೂ ತೊಂದರೆ ಕೊಡಬಾರದು’ ಎಂಬ ಮನಸ್ಥಿತಿ ಹೊಂದಿದ್ದ ಗೌರಿ ನಾಯ್ಕ ಅವರು `ತಮ್ಮ ಸಾವಿನ ನಂತರವೂ ಯಾರಿಗೂ ಸಮಸ್ಯೆ ಆಗಬಾರದು’ ಎಂದು ಯೋಚಿಸಿದ್ದಾರೆ `ಅನಾರೋಗ್ಯಕ್ಕೂ ಮುನ್ನ ಸಾವನಪ್ಪಬೇಕು’ ಎಂದು ಯೋಚಿಸಿ ಗಟ್ಟಿಮುಟ್ಟಾಗಿರುವಾಗಲೇ ಅವರು ಸಮುದ್ರಕ್ಕೆ ಹಾರಿ ಸಾವನಪ್ಪಿದ್ದಾರೆ!
Advertisement. Scroll to continue reading.
ಭಟ್ಕಳದ ಮುರುಡೇಶ್ವರದ ಬಳಿ ಗೌರಿ ನಾಗಪ್ಪ ನಾಯ್ಕ ಅವರು ವಾಸವಾಗಿದ್ದರು. 74 ವರ್ಷವಾದರೂ ಅವರು ಗಟ್ಟಿಮುಟ್ಟಾಗಿದ್ದರು. ಹೀಗಾಗಿ ಮನೆಯ ಎಲ್ಲಾ ಕೆಲಸವನ್ನು ಅವರು ನಿಭಾಯಿಸುತ್ತಿದ್ದರು. ಸ್ವಾಭಿಮಾನಿ ಸ್ವಭಾವದವಾರಿದ್ದ ಅವರು `ತಾನು ಯಾರಿಗೂ ಬಾರ ಆಗಬಾರದು. ತಮ್ಮಿಂದ ಯಾರಿಗೂ ತೊಂದರೆ ಆಗಬಾರದು’ ಎಂದು ಹೇಳುತ್ತಿದ್ದರು.
Advertisement. Scroll to continue reading.
ಈಚೆಗೆ ಅವರಿಗೆ ವಯೋ ಸಹಜ ರೋಗ ಕಾಣಿಸಿಕೊಂಡಿದ್ದು ಈ ಬಗ್ಗೆ ಅವರು ಯೋಚಿಸಿದ್ದರು. ತನ್ನ ಆರೈಕೆ ಮಾಡುವವರಿಗೆ ಸಮಸ್ಯೆ ಬಾರದಂತೆ ತಡೆಯುವುದಕ್ಕಾಗಿ ಅವರು ಸಾವಿನ ನಿರ್ಧಾರ ಮಾಡಿದರು. ಅದರ ಪ್ರಕಾರ, ಮುರುಡೇಶ್ವರದಲ್ಲಿನ ಅರಬ್ಬಿ ಸಮುದ್ರಕ್ಕೆ ಹೋದ ಅವರು ದೇವಾಲಯ ಬಲಭಾಗಕ್ಕೆ ತೆರಳಿದರು. ಅಲೆಗಳ ಅಬ್ಬರದ ನಡುವೆಯೂ ಆಳ ಸಮುದ್ರಕ್ಕೆ ಹೋಗುವ ಪ್ರಯತ್ನ ಮಾಡಿದರು.
Advertisement. Scroll to continue reading.
ನವೆಂಬರ್ 24ರ ನಸುಕಿನಲ್ಲಿ ಅವರು ಅಲೆಗಳಿಗೆ ಸಿಲುಕಿ ಕೊನೆಯುಸಿರೆಳೆದರು. ಕಡಲ ತೀರದಲ್ಲಿ ಬಿದ್ದಿದ್ದ ತಾಯಿ ಶವ ನೋಡಿ ಅಣ್ಣಪ್ಪ ನಾಯ್ಕ ಅವರು ಅಳುತ್ತಿದ್ದರು.