ರಕ್ತ ಕಾನ್ಸರಿನಿಂದ ಬಳಲುತ್ತಿರುವ ಕುಮಟಾದ ಜನಾರ್ಧನ ಮುಕ್ರಿ ಅವರಿಗೆ ಕುಮಟಾದ ಮಾಜಿ ಶಾಸಕಿ ಶಾರದಾ ಶೆಟ್ಟಿ ಅವರು ಹಣ ಸಹಾಯ ಮಾಡುವ ಭರವಸೆ ನೀಡಿದ್ದಾರೆ.
ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದವರು ಹಳಕಾರದ ಜನಾರ್ಧನ ಮುಕ್ರಿ ಅವರ ಪರಿಸ್ಥಿತಿಯ ಬಗ್ಗೆ ಶಾರದಾ ಶೆಟ್ಟಿ ಅವರಲ್ಲಿ ವಿವರಿಸಿದ್ದರು. 2 ಲಕ್ಷ ರೂಪಾಯಿಯಷ್ಟು ಆಸ್ಪತ್ರೆಯ ಬಿಲ್ ಆಗಿದ್ದು, ಅದನ್ನು ಪಾವತಿಸಲು ಸಹಾಯ ಮಾಡುವಂತೆ ಮನವಿ ಮಾಡಿದ್ದರು. ನಾರಾಯಣ ಹೃದಯಾಲಯದಲ್ಲಿರುವ ಜನಾರ್ಧನ ಮುಕ್ರಿ ಅವರ ತಾಯಿ ಪರಮೇಶ್ವರಿ ಮುಕ್ರಿ ಅವರಿಗೆ ಶಾರದಾ ಶೆಟ್ಟಿ ಅವರು ಫೋನ್ ಮಾಡಿ, ಮಗನ ಆರೋಗ್ಯ ವಿಚಾರಿಸಿದರು. ಈ ವೇಳೆ ಹಣ ಸಹಾಯ ಮಾಡುವ ಭರವಸೆ ನೀಡಿದರು.
ಈ ಮೊದಲು ಸಹ ಶಾರದಾ ಶೆಟ್ಟಿ ಅವರು ಕುಟುಂಬಕ್ಕೆ ನೆರವಾಗಿದ್ದರು. ಈ ಹಿನ್ನಲೆ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡ್ರಿಗಸ್ ಅವರು ಶಾರದಾ ಶೆಟ್ಟಿ ಅವರಿಗೆ ಕೃತಜ್ಞತೆ ಸಲ್ಲಿಸಿದರು. ಪ್ರಮುಖರಾದ ವನಿತಾ ಮುಕ್ರಿ, ಸಂತೋಷ ಮುಕ್ರಿ, ನಾಗೇಶ ಅವರು ಇದ್ದರು.