ಕಲಾ ಮತ್ತು ವಿಜ್ಞಾನ ಪದವಿ ಕಾಲೇಜಿನ ಕಟ್ಟಡಕ್ಕೆ ಅಗ್ನಿಸ್ಪರ್ಶವಾಗಿದ್ದು, ಅಗ್ನಿಶಾಮಕ ಸಿಬ್ಬಂದಿ ಸಮಯ ಪ್ರಜ್ಞೆಯಿಂದ ಅನಾಹುತ ತಪ್ಪಿದೆ. ಅಗ್ನಿ ಅನಾಹುತ ನೋಡಿ ಆತಂಕದಲ್ಲಿದ್ದ ಜನರನ್ನು ಅಗ್ನಿಶಾಮಕ ಸಿಬ್ಬಂದಿ ಸಮಾಧಾನ ಮಾಡಿದ್ದಾರೆ.
ಕಾರವಾರದ ಕಲಾ ಮತ್ತು ವಿಜ್ಞಾನ ಕಾಲೇಜು ಕಟ್ಟಡದ ಬಳಿ ಮರದ ರೆಂಬೆಗಳನ್ನು ಕತ್ತರಿಸಿ ರಾಶಿ ಹಾಕಲಾಗಿತ್ತು. ಅಲ್ಲಿದ್ದ ಎಲೆಗಳ ಜೊತೆ ರೆಂಬೆ-ಕೊAಬೆಗಳು ಒಣಗಿದ್ದವು. ಶನಿವಾರ ಸಂಜೆ 7 ಗಂಟೆ ವೇಳೆಗೆ ಮುರಿದ ಮರಕ್ಕೆ ಬೆಂಕಿ ಬಿದ್ದಿದ್ದು, ಅದರ ಜ್ವಾಲೆ ಕಾಲೇಜು ಕಟ್ಟಡದವರೆಗೂ ವ್ಯಾಪಿಸಿತು. ಅಲ್ಲಿದ್ದ ಕಾವಲು ಸಿಬ್ಬಂದಿ ಬೆಂಕಿ ನಿಯಂತ್ರಿಸುವ ಸಾಹಸ ಮಾಡಿದರು.
ಆದರೆ, ಜ್ವಾಲೆ ನಿಯಂತ್ರಣಕ್ಕೆ ಬಂದಿಲ್ಲ. ಕಟ್ಟಡದ ಮಟ್ಟದವರೆಗೆ ಬೆಂಕಿ ಹೋಗಿದ್ದು, ಹಳೆಯ ಕಟ್ಟಡಕ್ಕೂ ಬಿಸಿ ಮುಟ್ಟಿತು. ಮಾಹಿತಿ ಪಡೆದ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು. ನಿರಂತರ ಪ್ರಯತ್ನದಿಂದ ಆ ಬೆಂಕಿಯನ್ನು ಆರಿಸಿದರು. ಬೆಂಕಿ ಆರಿದ ಮೇಲೆ ಜನ ನೆಮ್ಮದಿಯ ನಿಟ್ಟುಸಿರು ಬಿಟ್ಟರು.