ಕುಮಟಾದ ಮಾಣಿಕಟ್ಟದಲ್ಲಿ ಅಪರೂಪದಲ್ಲಿಯೇ ಅಪರೂಪವಾದ ಕಗ್ಗ ಭತ್ತವನ್ನು ಸಂರಕ್ಷಿಸಲಾಗುತ್ತಿದೆ. ಇಲ್ಲಿನ ರೈತರೆಲ್ಲರೂ ಒಗ್ಗಟ್ಟಿನಿಂದ ನೂರಾರು ಎಕರೆ ಪ್ರದೇಶದಲ್ಲಿ ಈ ಭತ್ತ ಬೆಳೆಯುತ್ತಿದ್ದಾರೆ.
ಸದ್ಯ ಕಗ್ಗ ಭತ್ತಕ್ಕೆ ಜಿ ಐ ಟ್ಯಾಗ್ ಕೊಡಿಸುವ ಪ್ರಯತ್ನ ನಡೆದಿದೆ. ಕೃಷಿ ಇಲಾಖೆ ಅಧಿಕಾರಿಗಳ ಜೊತೆ ವಿಜ್ಞಾನಿಗಳು ಭತ್ತದ ಗದ್ದೆಗೆ ಹೋಗಿ ಪರಿಶೀಲನೆ ಮಾಡಿದ್ದಾರೆ. ಜೊತೆಗೆ ವಿವಿಧ ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಈ ಸಾಮೂಹಿಕ ಬೇಸಾಯ ಪದ್ದತಿ ಇಡೀ ಉತ್ತರಕನ್ನಡ ಜಿಲ್ಲೆಯಲ್ಲಿ ಕುಮಟಾದ ಮಾಣಿಕಟ್ಟಾದಲ್ಲಿ ಮಾತ್ರ ಕಾಣಸಿಗಲಿದೆ. ಈ ಸಾಮೂಹಿಕ ಬೇಸಾಯ ಪದ್ದತಿಯ ಮೂಲಕವೇ ಅಪರೂಪದ ಕಗ್ಗ ಭತ್ತವನ್ನು ಬೆಳೆಯುತ್ತಿರುವ ರೈತರಿಗೆ ಅಂತ್ರರಾಷ್ಟಿಯ ಮಟ್ಟದಲ್ಲಿ ಮಾನ್ಯತೆ ನೀಡಲು ಕಗ್ಗ ಭತ್ತದ ತಳಿಗೆ ಜಿ ಐ ಟ್ಯಾಗ್ ನೀಡುವ ಸಂಬoಧ ಕೆಲ ಪ್ರಗತಿಪರ ರೈತರು ಪ್ರಯತ್ನ ನಡೆಸಿದ್ದಾರೆ. ಅದರ ಭಾಗವಾಗಿಯೇ ಕೃಷಿ ಇಲಾಖೆಯ ಅಧಿಕಾರಿಗಳು ಮತ್ತು ಕೃಷಿ ವಿಜ್ಞಾನಿಗಳು ಮಾಣಿಕಟ್ಟಾಕ್ಕೆ ಭೇಟಿ ನೀಡಿ ಕಗ್ಗ ಭತ್ತ ತಳಿಯನ್ನು ಪರಿಶೀಲಿಸಿದ್ದಾರೆ. ಜೊತೆಗೆ ಅಲ್ಲಿನ ರೈತರೊಂದಿಗೆ ಚರ್ಚೆ ನಡೆಸಿದ್ದಾರೆ.
ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ನಾಗರಾಜ ನಾಯಕ, ಶಿರಸಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಶಿವಪ್ರಸಾದ, ಬೆಂಗಳೂರು ರಾಮಯ್ಯ ಇಂಟೆಲೆಕ್ಚ್ಯೂವಲ್ ಸೆಂಟರ್ ಫಾರ್ ಪ್ರಾಪರ್ಟಿ ರೈಟ್ಸ್ನ ಸಂಯೋಜಕರಾದ ಸಂಗೀತಾ ಮುರಳಿ, ಕೃಷಿ ವಿಜ್ಞಾನ ಕೇಂದ್ರ ಶಿರಸಿಯ ಮುಖ್ಯಸ್ಥೆ ರೂಪಾ ಪಾಟೀಲ್, ಶಿರಸಿಯ ಕೃಷಿಉಪ ನಿರ್ದೇಶಕ ಪಾಂಡು ಕೆ ಎಚ್, ಕುಮಟಾದ ಸಹಾಯಕ ಕೃಷಿ ನಿರ್ದೇಶಕರಾದ ವಿ ವೆಂಕಟೇಶಮೂರ್ತಿ ಅವರು ರೈತರ ಜೊತೆ ಸಂವಾದ ನಡೆಸಿದರು. `ನೋಂದಣಿ ಹೊಂದಿದ ರೈತರ ಸಮಿತಿಯನ್ನು ರಚಿಸಬೇಕು ಎಂಬ ಅಧಿಕಾರಿಗಳ ಸಲಹೆಯಂತೆ ಸದ್ಯ 19 ಸದಸ್ಯರನ್ನೊಳಗೊಂಡ ಮಾಣಿಕಟ್ಟ ಕಗ್ಗ ಭತ್ತ ರೈತರ ಉತ್ಪಾದಕ ಒಕ್ಕೂಟವನ್ನು ರಚಿಸಿಕೊಂಡು ಪದಾಧಿಕಾರಿಗಳನ್ನು ಆಯ್ಕೆ ಮಾಡಿಕೊಳ್ಳಬೇಕು’ ಎಂದವರು ತಿಳಿಸಿದರು.
ಮಾಣಿಕಟ್ಟ ರೈತರ ಪ್ರಮುಖರಾದ ಮಂಜುನಾಥ ಜಿ ಪಟಗಾರ ಅವರು ಈ ವಿಷಯದ ಬಗ್ಗೆ ಮಾಹಿತಿ ನೀಡಿದ್ದು, ಕಗ್ಗ ಭತ್ತ ರೈತರ ಉತ್ಪಾದಕ ಒಕ್ಕೂಟದ ಗೌರವಾಧ್ಯಕ್ಷ ಶ್ರೀಧರ ಎಂ ಪೈ, ಅಧ್ಯಕ್ಷರಾದ ಜಗನ್ನಾಥ ನಾಯ್ಕ, ಕಾರ್ಯದರ್ಶಿ ಮಂಜುನಾಥ ಜಿ ಪಟಗಾರ, ಉಪಾಧ್ಯಕ್ಷ ವಿನಾಯಕ ಗೌಡ, ಖಜಾಂಚಿ ವಾಸು ಪಟಗಾರ ಇದ್ದರು.