21 ವರ್ಷದ ಸಂಜನಾ ಅವರು ನವೆಂಬರ್ 24ರಂದು ಕಾಣೆಯಾಗಿದ್ದಾರೆ. `ತನ್ನ ಹೆಂಡತಿಯನ್ನು ಹುಡುಕಿಕೊಡಿ’ ಎಂದು ಅವರ ಪತಿ ಗುರುನಾಥ ಅವರು ಪೊಲೀಸರ ಮೊರೆ ಹೋಗಿದ್ದಾರೆ.
ADVERTISEMENT
ಹಳಿಯಾಳ ದೊಡ್ಡಕೊಪ್ಪ ಗ್ರಾಮದಲ್ಲಿ ಗುರುನಾಥ ವಾಸುದೇವ್ ಸುಳಗೇಕರ್ ಅವರು ಪತ್ನಿ ಸಂಜನಾ ಸುಳಗೇಕರ್ ಅವರ ಜೊತೆ ವಾಸವಾಗಿದ್ದರು. ಗುರುನಾಥ ಸುಳಗೇಕರ್ ಅವರು ಅಲ್ಲಿನ ಸಕ್ಕರೆ ಕಾರ್ಖಾನೆಯಲ್ಲಿ ಕೆಲಸ ಮಾಡಿಕೊಂಡಿದ್ದು, ಅವರ ಪತ್ನಿ ಸಂಜನಾ ಸುಳಗೇಕರ್ ಅವರು ಮನೆ ಕೆಲಸ ನೋಡಿಕೊಳ್ಳುತ್ತಿದ್ದರು. ಹೀಗಿರುವಾಗ ನವೆಂಬರ್ 24ರ ಮಧ್ಯಾಹ್ನ ಮನೆಯಿಂದ ಹೊರಹೋದ ಸಂಜನಾ ಅವರು ಮರಳಿ ಬಂದಿಲ್ಲ.
ADVERTISEMENT
ಸAಜೆ 6 ಗಂಟೆ ಅವಧಿಯಲ್ಲಿ ಗುರುನಾಥ ಸುಳಗೇಕರ್ ಅವರು ಮನೆಗೆ ಬಂದಾಗ ಸಂಜನಾ ಅವರು ಕಾಣಲಿಲ್ಲ. ಎಲ್ಲಾ ಕಡೆ ಹುಡುಕಾಟ ನಡೆಸಿದರೂ ಅವರು ಸಿಗಲಿಲ್ಲ. ಹೀಗಾಗಿ ಗುರುನಾಥ ಸುಳಗೇಕರ್ ಅವರು ಹಳಿಯಾಳ ಪೊಲೀಸರ ಮೊರೆ ಹೋಗಿದ್ದು, ಪೊಲೀಸರು ಸಹ ಸಂಜನಾ ಅವರ ಶೋಧ ನಡೆಸಿದ್ದಾರೆ.