ಮೂರು ವರ್ಷದೊಳಗೆ ತಬಲಾ ಕಲಿತ ಸ್ವರಶ್ರೀ ಹೆಗಡೆ ಅವರು ಪ್ರಮುಖ 12 ತಾಳಗಳನ್ನು ಉಚ್ಚರಿಸಿ, ಅದನ್ನು ನುಡಿಸುವುದರಲ್ಲಿ ಪರಿಣಿತಿಪಡೆದಿದ್ದಾರೆ. ಅವರ ಈ ಸಾಧನೆ ಇಂಡಿಯಾ ಬುಕ್ ಆಫ್ ರೆಕಾರ್ಡ್’ಗೆ ದಾಖಲಾಗಿದೆ.
ADVERTISEMENT
ಎರಡೂವರೆ ವರ್ಷಕ್ಕೆ ತಬಲಾ ಕಲಿತ ಸ್ವರಶ್ರೀ ಹೆಗಡೆ ಅವರು ಕಿರಿಯ ವಯಸ್ಸಿನಲ್ಲೇ ತನ್ನ ಪ್ರತಿಭೆ ಅನಾವರಣಗೊಳಿಸಿದ್ದಾರೆ. ಸಂಗೀತದ ಲಯ, ತಾಳ ಹಾಗೂ ಸ್ವರಗಳ ಸ್ಪಷ್ಟ ಪರಿಚಯದೊಂದಿಗೆ ಅವರು ಸಾಧನೆ ಮಾಡಿದ್ದಾರೆ. ಹೊನ್ನಾವರದ ತಬಲಾ ವಾದಕ ಗುರುರಾಜ ಹೆಗಡೆ ಆಡುಕಳ ಹಾಗೂ ಗಾಯಕಿ ಶ್ರೀಲತಾ ಹೆಗಡೆ ಅವರ ಪುತ್ರಿಯಾಗಿರುವ ಸ್ವರಶ್ರೀ ಹೆಗಡೆ ಅವರಿಗೆ ಈ ಕಲೆ ರಕ್ತಗತವಾಗಿ ಬಂದಿದೆ.
ADVERTISEMENT
ಪುಟ್ಟ ವಯಸ್ಸಿನಲ್ಲೇ ತಬಲಾದ ತಾಳಗಳನ್ನು ಕರಗತ ಮಾಡಿಕೊಂಡು ದಾಖಲೆ ಪುಸ್ತಕದಲ್ಲಿ ಸ್ಥಾನ ಪಡೆದಿರುವ ಸ್ವರಶ್ರೀ ಹೆಗಡೆ ಅವರ ಸಾಧನೆ ಇಡೀ ಜಿಲ್ಲೆಗೆ ಹೆಮ್ಮೆಯ ಕಿರೀಟ ಮೂಡಿಸಿದೆ. ಸಣ್ಣ ವಯಸ್ಸಿನಲ್ಲಿಯೇ ದೊಡ್ಡ ಸಾಧನೆ ಮಾಡಿದ ಸ್ವರಶ್ರೀ ಹೆಗಡೆ ಅವರು ತಮ್ಮೊಳಗಿನ ಪ್ರತಿಭೆಯಿಂದ ನಾಡಿನ ಗಮನ ಸೆಳೆದಿದ್ದಾರೆ.