ಕಾಡು ದಾರಿಯಲ್ಲಿ ಕಳ್ಳ ಸಾಗಾಣಿಕೆ ಮೂಲಕ ಕರ್ನಾಟಕಕ್ಕೆ ಬರುತ್ತಿದ್ದ ಗೋವಾ ಮದ್ಯ ಮಾರಾಟಕ್ಕೆ ಅಬಕಾರಿ ಸಿಬ್ಬಂದಿ ತಡೆ ಒಡ್ಡಿದ್ದಾರೆ. ಕಾರವಾರದ ಗಾಂವಗೇರಿ ಹಾಗೂ ಮುಡಗೇರಿ ಡ್ಯಾಮ್ ಬಳಿ ನಡೆದ ಕಾರ್ಯಾಚರಣೆಯಲ್ಲಿ ಭಾರೀ ಪ್ರಮಾಣದ ಮದ್ಯದ ಬಾಟಲಿಗಳು ಸಿಕ್ಕಿವೆ.
ಗಾವಂಗೇರಿಯಲ್ಲಿ ಟಾಟಾ ಇಂಡಿಕಾ ಕಾರು ಅಡ್ಡ ಹಾಕಿದ ಅಬಕಾರಿ ಅಧಿಕಾರಿಗಳು ಅದರಲ್ಲಿ ಸಾಗಿಸುತ್ತಿದ್ದ 6.14 ಲಕ್ಷ ರೂ ಮೌಲ್ಯದ 133.560 ಲೀಟರ್ ಮದ್ಯವನ್ನು ವಶಕ್ಕೆಪಡೆದಿದ್ದಾರೆ. ಜೊತೆಗೆ ಕಾರನ್ನು ಜಪ್ತು ಮಾಡಿದ್ದಾರೆ. ಮುಡಗೇರಿಯಲ್ಲಿ ಐದು ಬೈಕುಗಳನ್ನು ಅಡ್ಡಗಟ್ಟಿದ ಅಬಕಾರಿ ಸಿಬ್ಬಂದಿ ಗೋವಾ ಪೆನ್ನಿ, ಗೋವಾ ಮದ್ಯ, ಬಿಯರ್ ಸೇರಿ 3,62,350ರೂ ಮೌಲ್ಯದ 649.610 ಲೀ ಮದ್ಯ ಹಿಡಿದಿದ್ದಾರೆ. ಇಲ್ಲಿಯೂ ಆ ಐದು ಬೈಕುಗಳನ್ನು ಜಪ್ತು ಮಾಡಿದ್ದಾರೆ.
ಬುಧವಾರ ರಾತ್ರಿ ಹಾಗೂ ಗುರುವಾರ ಬೆಳಗಿನ ಅವಧಿಯಲ್ಲಿ ಈ ಕಾರ್ಯಾಚರಣೆ ನಡೆದಿದೆ. ದಾಳಿ ವೇಳೆ ಆರೋಪಿತರು ಓಡಿ ಹೋಗಿದ್ದಾರೆ. ಮದ್ಯ ಹಾಗೂ ವಾಹನ ವಶಕ್ಕೆಪಡೆಯುವದರಲ್ಲಿ ತಲ್ಲೀನರಾಗಿದ್ದ ಅಬಕಾರಿ ಸಿಬ್ಬಂದಿ ಬಳಿ ಆರೋಪಿತರನ್ನು ಬೆನ್ನಟ್ಟಿ ಹಿಡಿಯಲು ಸಾಧ್ಯವಾಗಲಿಲ್ಲ.