ಯಲ್ಲಾಪುರದ ವನಿತಾ ಭಟ್ಟ ಅವರಿಂದ ಉಪ್ಪಿನಕಾಯಿ ಡಬ್ಬಿ ಖರೀದಿಸಿದ ಮೈಸೂರಿನ ವೇಣುಗೋಪಾಲ್ ಅವರು ಅದರ ಹಣ ಪಾವತಿ ಮಾಡಿಲ್ಲ. ಉಪ್ಪಿನಕಾಯಿಯ ಹಣ ಕೊಡುವಂತೆ ಕೇಳಿದ ಕಾರಣ ವನಿತಾ ಭಟ್ಟ ಅವರ ವಿರುದ್ಧವೇ ದೂರು ದಾಖಲಿಸುವ ಸಾಹಸ ಮಾಡಿದ್ದಾರೆ!
ಯಲ್ಲಾಪುರದ ಇಂಡಸ್ಟಿಸ್ ಏರಿಯಾದಲ್ಲಿ ವನಿತಾ ರಾಮಚಂದ್ರ ಭಟ್ಟ ಅವರು ಉಪ್ಪಿನಕಾಯಿ ಕಾರ್ಖಾನೆ ನಡೆಸುತ್ತಿದ್ದಾರೆ. 52 ವರ್ಷದ ಅವರು ಬಗೆ ಬಗೆಯ ಉಪ್ಪಿನಕಾಯಿ ಸಿದ್ಧಪಡಿಸಿ ಮಾರಾಟ ಮಾಡುತ್ತಾರೆ. ದಿವ್ಯಾ ಹನಿ ಹೋಂ ಇಂಡಸ್ಟ್ರೀಸ್ ಎಂಬ ಹೆಸರಿನ ಅಡಿ ಅವರು ಈ ವ್ಯವಹಾರ ಮಾಡಿಕೊಂಡಿದ್ದಾರೆ. ಮೈಸೂರಿನ ವೇಣುಗೋಪಾಲ ಎಚ್ ಎನ್ ಅವರು ವನಿತಾ ಭಟ್ಟ ಅವರು ಸಿದ್ಧಪಡಿಸಿದ ಉಪ್ಪಿನಕಾಯಿಯ ಋಚಿ ನೋಡಿದ್ದು, `ತಮಗೂ ಅದನ್ನು ಸರಬರಾಜು ಮಾಡಿ’ ಎಂದು ದುಂಬಾಲು ಬಿದ್ದಿದ್ದಾರೆ.
2025ರ ನವೆಂಬರ್ 11ರಂದು ದಿವ್ಯಾ ಹನಿ ಹೋಂ ಇಂಡಸ್ಟಿ ಇಂಡಸ್ಟ್ರೀಸ್ ವೇಣುಗೋಪಾಲ ಎಚ್ ಎನ್ ಅವರು ತಮ್ಮ ಕಾಟನ್ ಬ್ರಿಡ್ಜ್ ಪೈ ಲಿ ಕಂಪನಿಗೆ ಉಪ್ಪಿನಕಾಯಿಗಳ ಡಬ್ಬಿ ತರಿಸಿದ್ದಾರೆ. ವನಿತಾ ಭಟ್ಟ ಅವರು ಒಟ್ಟು 14 ಬಗೆಯ ಉಪ್ಪಿನಕಾಯಿಗಳನ್ನು ಸಿದ್ಧಪಡಿಸಿ ಅವರಿಗೆ ಕಳುಹಿಸಿದ್ದಾರೆ. ವೇಣುಗೋಪಾಲ ಅವರ ಕಂಪನಿಗೆ ಒಟ್ಟು 1.83 ಲಕ್ಷ ರೂ ಮೌಲ್ಯದ ಉಪ್ಪಿನಕಾಯಿಗಳನ್ನು ಅವರು ರವಾನಿಸಿದ್ದಾರೆ. ಇದಕ್ಕಾಗಿ ವೇಣುಗೋಪಾಲ ಅವರು 15 ಸಾವಿರ ರೂ ಹಣವನ್ನು ಫೋನ್ ಫೇ ಮಾಡಿದ್ದಾರೆ.
ಅದಾದ ನಂತರ ಆ ಉಪ್ಪಿನಕಾಯಿ ಹಣ ಕೊಡುವಂತೆ ವನಿತಾ ಭಟ್ಟ ಅವರು ಕೇಳಿದ್ದಾರೆ. ಆದರೆ, 1.68 ಲಕ್ಷ ರೂ ಬಾಕಿಯಿರಿಸಿಕೊಂಡಿದ್ದ ವೇಣುಗೋಪಾಲ್ ಅವರು ಆ ಹಣ ಕೊಡಲು ಒಪ್ಪುತ್ತಿಲ್ಲ. ಬದಲಾಗಿ ತಮ್ಮ ರಾಜಕೀಯ ಪ್ರಭಾವ ಬಳಸಿ ವನಿತಾ ಭಟ್ಟ ಅವರ ವಿರುದ್ಧವೇ ಕೇಸು ಹಾಕುವ ಪ್ರಯತ್ನ ಮಾಡಿದ್ದಾರೆ. ಜೊತೆಗೆ ವನಿತಾ ಭಟ್ಟ ಅವರಿಗೆ ಕೆಟ್ಟದಾಗಿ ಬೈದು, ನಿಂದಿಸಿದ್ದಾರೆ. ಈ ಎಲ್ಲಾ ವಿಷಯದ ಬಗ್ಗೆ ವನಿತಾ ಭಟ್ಟ ಅವರು ಯಲ್ಲಾಪುರ ಪೊಲೀಸರಲ್ಲಿ ದೂರಿದ್ದು, ಆ ಬಗ್ಗೆ ಪೊಲೀಸರು ವಿಚಾರಣೆ ಶುರು ಮಾಡಿದ್ದಾರೆ.