ಗೋಕರ್ಣದ ಕೂರ್ಸೆ ಮನೆತನದ ಕಾವ್ಯಶ್ರೀ ಕೂರ್ಸೆ ಅವರು 21ನೇ ವಯಸ್ಸಿನಲ್ಲಿಯೇ ವಿಮಾನದ ಪೈಲೆಟ್ ಆಗಿದ್ದಾರೆ. ನಿತ್ಯವೂ ಬಾನಂಗಳದಲ್ಲಿ ಹಾರಾಡುವ ಬಗ್ಗೆ ಬಾಲ್ಯದಲ್ಲಿಯೇ ಕಂಡಿದ್ದ ಕನಸನ್ನು ಅವರು ಈಡೇರಿಸಿಕೊಂಡಿದ್ದಾರೆ.
ಕಾವ್ಯಶ್ರೀ ಕೂರ್ಸೆ ಅವರ ತಂದೆ ಲಕ್ಸ್ಮಿನಾರಾಯಣ ಕೂರ್ಸೆ ಅವರು ಗೋವಾದಲ್ಲಿ ವೈದಿಕರಾಗಿದ್ದಾರೆ. ತಾಯಿ ಶ್ಯಾಮಲಾ ಕೂರ್ಸೆ ಅವರ ನಿರಂತರ ಪ್ರೋತ್ಸಾಹದಿಂದಾಗಿ ಕಾವ್ಯಶ್ರೀ ಕೂರ್ಸೆ ಅವರು ಈಗಾಗಲೇ 200 ತಾಸಿನ ವಿಮಾನ ಹಾರಾಟ ನಡೆಸಿದ್ದಾರೆ. ಆ ಮೂಲಕ ಕಮರ್ಷಿಯಲ್ ಪೈಲೆಟ್ ಲೈಸನ್ಸ್ ಸ್ವೀಕರಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಮೊದಲ ಮಹಿಳಾ ಪೈಲೆಟ್ ಆಗಿ ಕಾವ್ಯಶ್ರೀ ಕೂರ್ಸೆ ಹೆಸರು ಮಾಡಿದ್ದಾರೆ.
ಗೋವಾದಲ್ಲಿಯೇ ಬಾಲ್ಯ ಕಳೆದ ಕಾವ್ಯಶ್ರೀ ಕೂರ್ಸೆ ಅವರು ತಮ್ಮ ಮನೆ ಮೇಲೆ ನಿತ್ಯ ವಿಮಾನ ಹಾರಾಟ ನೋಡುತ್ತಿದ್ದರು. `ತಾನೂ ಇಂಥ ವಿಮಾನ ಹಾರಿಸಬೇಕು’ ಎಂದವರು ಕನಸು ಕಂಡಿದ್ದರು. ಗೋವಾದಲ್ಲಿಯೇ ಶಿಕ್ಷಣ ಮುಗಿಸಿದ ಅವರು ಮಹಾರಾಷ್ಟದ ಬಾರಾಮತಿ ವಿಮಾನ ತರಬೇತಿ ಕೇಂದ್ರದಲ್ಲಿ ಅಭ್ಯಾಸ ಮಾಡಿದರು. ನಿರಂತರ ಪ್ರಯತ್ನದ ಫಲವಾಗಿ ಅವರು ವಿಮಾನ ಹಾರಾಟದ ಪರವಾನಿಗೆಪಡೆದರು.