ರಾಜ್ಯ ಸರ್ಕಾರದ ಮಹತ್ವದ ಯೋಜನೆಗಳಲ್ಲಿ ಒಂದಾದ `ಗೃಹಲಕ್ಷ್ಮೀ’ಗೆ ಪೂರಕವಾಗಿ ಸಹಕಾರಿ ಸಂಘ ಸ್ಥಾಪನೆ ನಡೆಯುತ್ತಿದ್ದು, ಯಲ್ಲಾಪುರದ ಮಹಿಳೆಯರಿಬ್ಬರು ಈ ಸಹಕಾರಿ ಸಂಸ್ಥೆಯ ನಿರ್ದೇಶಕ ಸ್ಥಾನಕ್ಕಾಗಿ ನಾಮಪತ್ರ ಸಲ್ಲಿಸಿದ್ದಾರೆ.
Advertisement. Scroll to continue reading.
Advertisement. Scroll to continue reading.
ಗೃಹಲಕ್ಷ್ಮೀ ವಿವಿಧೋದ್ದೇಶ ಸಹಕಾರಿ ಸಂಘದ ರಾಜ್ಯ ಪದಾಧಿಕಾರಿ ಸ್ಥಾನಕ್ಕೆ ಯಲ್ಲಾಪುರದ ರೂಪಾ ಜನಾರ್ಧನ ಪಾಟಣಕರ್ ಮತ್ತು ಮುಷರತ್ ಶೇಖ್ ಅವರು ಉಮೇದುದಾರಿಕೆ ಸಲ್ಲಿಸಿದ್ದಾರೆ. ರೂಪಾ ಪಾಠಣಕರ್ ಅವರು ಭಾರತ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿಯ ನಿರ್ದೇಶಕರಾಗಿದ್ದಾರೆ. ಅಂಬೇಡ್ಕರ್ ಸೇವಾ ಸಮತಿ ಹಾಗೂ ತೊಗಲು ಹರಳ್ಳಯ್ಯ ಟ್ರಸ್ಟ್ ಮೂಲಕವೂ ವಿವಿಧ ಸಾಮಾಜಿಕ ಕಾರ್ಯದಲ್ಲಿ ತೊಡಗಿದ್ದಾರೆ.
Advertisement. Scroll to continue reading.
ಮುಷರತ್ ಶೇಖ್ ಅವರು ಪಂಚ ಗ್ಯಾರಂಟಿ ಯೋಜನೆಯ ಅನುಷ್ಠಾನಕ್ಕಾಗಿ ಮಾಡಲಾದ ಗ್ಯಾರಂಟಿ ಸಮಿತಿಯ ಸದಸ್ಯರಾಗಿದ್ದಾರೆ. ಅವರಿಬ್ಬರು ಕಾಂಗ್ರೆಸ್ ಕಾರ್ಯಕರ್ತರಾಗಿದ್ದು, ಕೆಪಿಸಿಸಿ ಸದಸ್ಯ ವಿವೇಕ್ ಹೆಬ್ಬಾರ್ ಅವರ ಮಾತಿನಂತೆ ಈ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಶುಕ್ರವಾರ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, ಬೆಂಗಳೂರಿನಲ್ಲಿ ಈ ದಿನ ಅವರಿಬ್ಬರು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.