ಕಳೆದ 30 ವರ್ಷಗಳಿಂದ ಮದ್ಯ ವ್ಯಸನಕ್ಕೆ ಒಳಗಾಗಿದ್ದ 48 ವರ್ಷದ ಮಾರುತಿ ಮಿರಾಶಿ ಅವರು ನಿಗೂಡವಾಗಿ ಕಾಣೆಯಾಗಿದ್ದು, ಅವರ ಶವ ಕಾಡಿನಲ್ಲಿ ಸಿಕ್ಕಿದೆ.
ಯಲ್ಲಾಪುರದ ಬೈಲಂದೂರಿನಲ್ಲಿ ಮಾರುತಿ ದೇಮಣ್ಣ ಮಿರಾಶಿ ಅವರು ವಾಸವಾಗಿದ್ದರು. ಯುವಕನಾಗಿರುವಾಗಲೇ ಅವರು ದುಶ್ಚಟಕ್ಕೆ ದಾಸರಾಗಿದ್ದರು. ರೈತರಾಗಿದ್ದ ಅವರು ತಮ್ಮ ಆದಾಯದ ಬಹುಪಾಲು ಹಣವನ್ನು ಮದ್ಯದ ಅಂಗಡಿಗೆ ಕೊಡುತ್ತಿದ್ದರು. ಕುಡಿತದ ಪ್ರಭಾವದಿಂದಾಗಿ ಅವರು ಮಾನಸಿಕವಾಗಿಯೂ ಕುಗ್ಗಿದ್ದರು.
ನವೆಂಬರ್ 19ರಂದು ಮಾರುತಿ ಮಿರಾಶಿ ಅವರು ಜಮೀನಿಗೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಟಿದ್ದರು. ಆದರೆ, ಎರಡು ದಿನ ಕಳೆದರೂ ಅವರು ಮನೆಗೆ ಬಂದಿರಲಿಲ್ಲ. ಹೀಗಾಗಿ ನವೆಂಬರ್ 21ರಂದು ಅವರ ತಮ್ಮ ವಿಠ್ಠಲ ಮಿರಾಶಿ ಅವರು ತಂದೆಯ ಹುಡುಕಾಟಕ್ಕೆ ಪೊಲೀಸರ ನೆರವು ಯಾಚಿಸಿದ್ದರು.
ನವೆಂಬರ್ 22ರಂದು ಬೈಲಂದೂರು ಗ್ರಾಮದ ಅರಣ್ಯ ಪ್ರದೇಶದಲ್ಲಿ ಮಾರುತಿ ಮಿರಾಶಿ ಅವರ ಶವ ಸಿಕ್ಕಿತು. ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಅವರ ದೇಹ ಮರಕ್ಕೆ ನೇತಾಡುತ್ತಿತ್ತು. ಶವದ ಸುತ್ತಲು ದುರ್ವಾಸನೆ ಬರುತ್ತಿದ್ದು, ಕೆಲ ದಿನಗಳ ಹಿಂದೆಯೇ ಮಾರುತಿ ಮಿರಾಶಿ ಅವರು ಸಾವನಪ್ಪಿರುವ ಶಂಕೆವ್ಯಕ್ತವಾಯಿತು.