ಹೊನ್ನಾವರದ ನಾಗರಾಜ ನಾಯ್ಕ ಅವರು ಅಕ್ರಮ ಮರಳು ದಂಧೆಯಲ್ಲಿ ತೊಡಗಿದನ್ನು ಭಟ್ಕಳ ಪೊಲೀಸರು ಪತ್ತೆ ಮಾಡಿದ್ದಾರೆ. ಪರಿಸರಕ್ಕೆ ಹಾನಿ ಆಗುವ ರೀತಿ ಮರಳು ತೆಗೆದು ಕದ್ದು ಸಾಗಿಸುತ್ತಿದ್ದ ಅವರನ್ನು ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ಭರಮಪ್ಪ ಬೆಳಗಲಿ ಅವರು ಹಿಡಿದಿದ್ದಾರೆ.
ಹೊನ್ನಾವರ ಮಂಕಿಯ ಕಾಜಿಮನೆಯ ನಾಗರಾಜ ನಾಯ್ಕ ಅವರು ಲಾರಿ ಚಾಲಕರಾಗಿದ್ದಾರೆ. ಅವರು ತಮ್ಮ ಟಿಪ್ಪರಿನಲ್ಲಿ ನಿರಂತರವಾಗಿ ಮರಳು ಸಾಗಾಟ ಮಾಡುತ್ತಿದ್ದು, ಸರ್ಕಾರಿ ಬೊಕ್ಕಸಕ್ಕೆ ಹಾನಿ ಮಾಡುತ್ತಿದ್ದಾರೆ. ಜೊತೆಗೆ ಮರಳು ತೆಗೆಯಲು ಹಾಗೂ ಸಾಗಾಟಕ್ಕೆ ಅವರು ಪರವಾನಿಗೆ ಸಹ ಪಡೆದಿಲ್ಲ. ತಮ್ಮ ಲಾಭಕ್ಕಾಗಿ ಅವರು ಪರಿಸರಕ್ಕೆ ಹಾನಿ ಮಾಡಿ ಮರಳುಗಾರಿಕೆ ನಡೆಸುತ್ತಿದ್ದಾರೆ.
ಹೀಗಿರುವಾಗ ಅಕ್ಟೊಬರ್ 31ರಂದು ಹಗಲಿನಲ್ಲಿಯೇ ಅವರು ಮರಳು ಸಾಗಾಟ ಮಾಡುತ್ತಿದ್ದರು. ಶಿರಾಲಿ ಜಂಕ್ಷನ್ ಬಳಿ ಪಿಎಸ್‌ಐ ಭರಮಪ್ಪ ಬೆಳಗಲಿ ಅವರು ಟಿಪ್ಪರಿಗೆ ಅಡ್ಡಲಾಗಿ ಕೈ ಮಾಡಿದರು. ಅಕ್ರಮ ಮರಳು ಸಾಗಾಟ ನೋಡಿದ ಪೊಲೀಸರು ಲಾರಿಯಲ್ಲಿದ್ದ ಮರಳನ್ನು ವಶಕ್ಕೆಪಡೆದರು. ದಾಖಲೆ ಇಲ್ಲದ ಕಾರಣ ಪ್ರಕರಣ ದಾಖಲಿಸಿದರು.