ಮನಸಾರೆ ಪ್ರೀತಿಸಿದ ಹುಡುಗಿ ಮದುವೆಗೆ ಒಪ್ಪದ ಕಾರಣ ಸಿದ್ದಾಪುರದ ಜನಾರ್ಧನ ಗೊಂಡ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಜನಾರ್ಧನ ಕಲ್ಲಾ ಗೊಂಡ (27) ಅವರು ಸಿದ್ದಾಪುರ ಕಾನಗೋಡಿನ ಹಳ್ಳಿಬೈಲಿನಲ್ಲಿ ವಾಸವಾಗಿದ್ದರು. ಸೆಂಟ್ರಿoಗ್ ಕೆಲಸ ಮಾಡಿಕೊಂಡು ಅವರು ಬದುಕುತ್ತಿದ್ದರು. ಅನೇಕ ವರ್ಷಗಳಿಂದ ಅವರು ಯುವತಿಯೊಬ್ಬರನ್ನು ಪ್ರೀತಿಸುತ್ತಿದ್ದು, ಅವರನ್ನೇ ಮದುವೆ ಆಗಲು ನಿರ್ಧರಿಸಿದ್ದರು. ಆದರೆ, ಆ ಯುವತಿ ಮದುವೆಗೆ ಒಪ್ಪಿರಲಿಲ್ಲ.
ಪ್ರೀತಿಸಿದ ಹುಡುಗಿ ಮದುವೆಗೆ ಸಿಗದ ಕಾರಣ ಜನಾರ್ಧನ ಗೊಂಡ ಅವರು ಬೇಸರದಲ್ಲಿದ್ದರು. ಅದೇ ಬೇಸರದಲ್ಲಿ ಅವರು ನವೆಂಬರ್ 11ರಂದು ಗದ್ದೆಗೆ ಹೋಗಿ ಕ್ರಿಮಿನಾಶಕ ಸೇವಿಸಿದರು. ಅಲ್ಲಿ ಒದ್ದಾಡುತ್ತಿದ್ದ ಜನಾರ್ಧನ ಗೊಂಡ ಅವರನ್ನು ಕುಟುಂಬದವರು ಸಿದ್ದಾಪುರ ಆಸ್ಪತ್ರೆಗೆ ದಾಖಲಿಸಿದರು. ನಂತರ ನವೆಂಬರ್ 17ಕ್ಕೆ ಶಿವಮೊಗ್ಗ ಆಸ್ಪತ್ರೆ ಸಾಗಿಸಿ ಚಿಕಿತ್ಸೆ ಕೊಡಿಸಿದರು.
ಜನಾರ್ಧನ ಗೊಂಡ ಅವರ ಆರೋಗ್ಯದಲ್ಲಿ ಚೇತರಿಕೆ ಕಾಣದ ಕಾರಣ ಅವರನ್ನು ಮಂಗಳೂರಿಗೆ ಕರೆದೊಯ್ದರು. ಮಂಗಳೂರಿನ ಕೆ ಎಸ್ ಹೆಗಡೆ ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆಯುತ್ತಿದ್ದ ಅವರು ನವೆಂಬರ್ 19ರಂದು ಸಾವನಪ್ಪಿದರು. ಈ ಎಲ್ಲಾ ವಿಷಯದ ಬಗ್ಗೆ ಕುಮಟಾ ಬಡಾಳದ ಬೀರಾ ಗೋವಿಂದ ಗೌಡ ಅವರು ಪೊಲೀಸರಿಗೆ ಮಾಹಿತಿ ನೀಡಿದರು.
`ಆತ್ಮಹತ್ಯೆ ಅಪರಾಧ’